ಅಭಿಪ್ರಾಯ / ಸಲಹೆಗಳು

ಒಇಸಿಡಿ

ಭಾರತದಲ್ಲಿ OECD ಬೀಜ ಪ್ರಮಾಣೀಕರಣ :
1. ಪರಿಚಯ

a. OECD (Organisation for Economic Co-operation and Development) ಸಂಸ್ಥೆಯು 1958 ರಲ್ಲಿ ಸ್ಥಾಪನೆಯಾದ ಅಂತರ್-ಸರ್ಕಾರಿ ಸಂಸ್ಥೆ, ಆರ್ಥಿಕ
ಸಹಕಾರ ಮತ್ತು ಅಭಿವೃದ್ಧಿ ಸಂಸ್ಥೆಯಾಗಿರುತ್ತದೆ. ಈ ಸಂಸ್ಥೆಯ Secretariat ಪ್ಯಾರಿಸ್ (ಫ್ರಾನ್ಸ್) ನಲ್ಲಿದೆ. ಈ ಸಂಸ್ಥೆಯು ಆರ್ಥಿಕ ಮತ್ತು ಸಾಮಾಜಿಕ
ನೀತಿಗಳನ್ನು ಚರ್ಚಿಸಲು, ಅಭಿವೃದ್ಧಿಪಡಿಸಲು ಮತ್ತು ಸುಧಾರಿಸಲು ಬಹುಪಕ್ಷೀಯ ವೇದಿಕೆಯನ್ನು ಒದಗಿಸುತ್ತದೆ.
b. ಸುಸ್ಥಿರ ಆರ್ಥಿಕ ಬೆಳವಣಿಗೆ ಮತ್ತು ಉದ್ಯೋಗ, ಹೆಚ್ಚುತ್ತಿರುವ ಜೀವನಮಟ್ಟ ಮತ್ತು ವ್ಯಾಪಾರ ಉದಾರೀಕರಣ ಉತ್ತೇಜಿಸುವುದು ಈ ಸಂಸ್ಥೆಯ ಉದ್ದೇಶವಾಗಿರುತ್ತದೆ.
c. OECD ಯುತಾಂತ್ರಿಕ ಕಾರ್ಯ ಸಮೂಹ ಮತ್ತು ವಾರ್ಷಿಕ ಸಭೆಗಳಲ್ಲಿ ದೇಶೀಯ ಮತ್ತು ಅಂತರಾಷ್ಟ್ರೀಯ ನೀತಿಗಳನ್ನು ಚರ್ಚಿಸಲು ಮತ್ತು ಅಭಿವೃದ್ಧಿಪಡಿಸಲು
ತನ್ನ ಸದಸ್ಯ ರಾಷ್ಟ್ರಗಳನ್ನು ಒಟ್ಟುಗೂಡಿಸುತ್ತದೆ.
d. OECD ಯು ಸಮಸ್ಯೆಗಳನ್ನು ವಿಶ್ಲೇಷಿಸುವ ಉತ್ತಮ ನೀತಿ ಅಭ್ಯಾಸಗಳನ್ನು ಗುರುತಿಸುವ ವಿಶಿಷ್ಟ ವೇದಿಕೆಯಲ್ಲಿ ಕ್ರಮವನ್ನು ಶಿಫಾರಸ್ಸು ಮಾಡವಕಾರ್ಯವನ್ನು
ಮಾಡುತ್ತದೆ. ಈ ವೇದಿಕೆಯಲ್ಲಿ ದೇಶಗಳು ತಮ್ಮ ಅನುಭವಗಳನ್ನು ಇತರ ಅನುಭವಗಳೊಂದಿಗೆ ಹೋಲಿಸಿಕೊಳ್ಳಬಹುದು, ಏಕರೀತಿಯ ಸಮಸ್ಯೆಗಳಿಗೆ ಉತ್ತರಗಳನ್ನು
ಪಡೆಯಬಹುದು ಮತ್ತು ಜೊತೆಯಾಗಿ ಕೆಲಸಗಳನ್ನು ನಿರ್ವಹಿಸಲು ನಿಯಮಗಳನ್ನು ಮಾಡಬಹುದು.

2. OECD ಯೋಜನೆಗಳು
OECD ಯಲ್ಲಿ 6 ಬೀಜ ಯೋಜನೆಗಳಿವೆ.
1. ಹುಲ್ಲು ಮತ್ತು ದ್ವಿದಳ ಧಾನ್ಯಗಳು
2. Crucifers ಮತ್ತು ಇತರ ಎಣ್ಣೆ ಅಥವಾ ನಾರಿನ ಪ್ರಭೇದಗಳು
3. ಏಕ ಧಾನ್ಯಗಳು (Cereals)
4. ಮೆಕ್ಕೆಜೋಳ
5. ಜೋಳ
6. ತರಕಾರಿ

3. OECD ಯಲ್ಲಿ ಭಾಗವಹಿಸುವ ದೇಶಗಳು
ಭಾರತವನ್ನು ಒಳಗೊಂಡಂತೆ, ಯುರೋಪ್, ಉತ್ತರ ಮತ್ತು ದಕ್ಷಿಣಅಮೆರಿಕಾ, ಮಧ್ಯಪ್ರಾಚ್ಯ, ಏಷ್ಯಾಮತ್ತು ಓಷಿಯನ್‍ನ 61 ದೇಶಗಳು ಪ್ರಸ್ತುತ OECD ಬೀಜ
ಯೋಜನೆಗಳಲ್ಲಿ ಭಾಗವಹಿಸುತ್ತಿವೆ.

ಸದಸ್ಯ ರಾಷ್ಟ್ರಗಳು:

1.ಆಸ್ಟ್ರೇಲಿಯ
2. ಆಸ್ಟ್ರಿಯಾ
3. ಬೆಲ್ಜಿಯಂ
4. ಕೆನಡ
5. ಚಿಲಿ
6. ಜೆಕ್‍ರಿಪಬ್ಲಿಕ್
7. ಡೆನ್‍ಮಾರ್ಕ್
8. ಈಸ್ಟೋನಿಯ
9. ಫಿನ್‍ಲ್ಯಾಂಡ್
10. ಫ್ರಾನ್ಸ್
11. ಜರ್ಮನಿ
12. ಗ್ರೀಸ್
13. ಹಂಗೇರಿ
14. ಐಲೆಂಡ್
15. ಐರ್ಲೆಂಡ್
16. ಇಸ್ರೇಲ್
17. ಇಟಲಿ
18. ಜಪಾನ್
19. ಲ್ಯಾಟ್ವಿಯ
20. ಲಕ್ಸನ್‍ಬರ್ಗ್
21. ಮೆಕ್ಸಿಕೋ
22. ನೆದರ್‍ಲ್ಯಾಂಡ್
23. ನ್ಯೂಜಿಲ್ಯಾಂಡ್
24. ನಾರ್ವೆ
25. ಪೋಲ್ಯಾಂಡ್
26. ಪೋರ್ಚುಗಲ್
27. ಸ್ಲೋವಾಕಿಯ
28. ಸ್ಲೋವೇನಿಯ
29. ಸ್ಪೇನ್
30. ಸ್ವೀಡನ್
31. ಸ್ವಿಟ್ಜಲ್ರ್ಯಾಂಡ್
32. ಟರ್ಕಿ
33. ಯುನೈಟೆಡ್ ಕಿಂಗ್‍ಡಮ್
34. ಯುನೈಟೆಡ್ ಸ್ಟೇಟ್ಸ್

ಸದಸ್ಯರಲ್ಲದರಾಷ್ಟ್ರಗಳು:

1. ಅಲ್ಬೇನಿಯ
2. ಅರ್ಜೈಂಟೈನ
3. ಬೊಲಿವಿಯ
4. ಬ್ರೇಜಿಲ್
5. ಬಲ್ಗೇರಿಯಾ
6. ಕ್ರೋಏಷಿಯಾ
7. ಸೈಪ್ರಸ್
8. ಈಜಿಪ್ಟ್
9. ಭಾರತ
10. ಇರಾನ್
11. ಕೀನ್ಯ
12. ಕಿರ್ಜಿಸ್ಥಾನ್
13. ಲಿಥುಯೂನಿಯಾ
14. ಮೋಲ್ಡೋವ
15. ಮೋರಾಕ್ಕೋ
16. ರೋಮ್ಯಾನಿಯ
17. ರಷ್ಯನ್ ಫೆಡರೇಷನ್
18. ಸೆನೆಗಲ್
19. ಸೆರ್ಬಿಯಾ
20. ದಕ್ಷಿಣಆಫ್ರಿಕ
21. ತಾಂಜಾನಿಯ
22. ಟುನೀಶಿಯ
23. ಉಗಾಂಡ
24. ಉಕ್ರೇನ್
25. ಉರುಗ್ವೇ
26. ಜಾಂಬಿಯ
27. ಜಿಂಬಾವೆ

4. ಉದ್ದೇಶ
a. OECD ಬೀಜ ಪ್ರಮಾಣೀಕರಣ ಯೋಜನೆಗಳಲ್ಲಿ ಭಾಗವಹಿಸುವ ದೇಶಗಳಲ್ಲಿ ಗುಣಮಟ್ಟವನ್ನು ಖಾತರಿಪಡಿಸಿದ ಬೀಜದ ಬಳಕೆಯನ್ನು ಉತ್ತೇಜಿಸುವುದು.
b. ಗುರುತಿಸುವಿಕೆ ಮತ್ತು ಶುದ್ದತೆಯನ್ನು ಖಾತ್ರಿಪಡಿಸುವ ಒಪ್ಪಿದ ತತ್ವಗಳ ಪ್ರಕಾರ ಅಂತರಾಷ್ಟ್ರೀಯ ವ್ಯಾಪಾರಕ್ಕಾಗಿ ಉತ್ಪಾದಿಸಿದ ಮತ್ತು ಸಂಸ್ಕರಿಸಿದ ಬೀಜಕ್ಕಾಗಿ
ಲೇಬಲ್‍ಗಳು ಮತ್ತು ಪ್ರಮಾಣ ಪತ್ರಗಳ ಬಳಕೆಯನ್ನು ಈ ಯೋಜನೆಗಳು ಅಧಿಕೃತಗೊಳಿಸುತ್ತವೆ.
c. ಅಂತರರಾಷ್ಟ್ರೀಯವಾಗಿ ಗುರುತಿಸಲ್ಪಟ್ಟ ಲೇಬಲ್‍ಗಳ ಮೂಲಕ (ವ್ಯಾಪಾರಕ್ಕಾಗಿ ಪಾಸ್‍ಪೋರ್ಟ್‍ಗಳು) ತಾಂತ್ರಿಕ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕುವ
ಮೂಲಕ ಬೀಜಗಳ ಆಮದು ರಫ್ತಿಗೆ ಯೋಜನೆಗಳು ಅನುಕೂಲ ಮಾಡಿ ಕೊಡುತ್ತವೆ.
d. ವಿದೇಶದಲ್ಲಿ ಬೀಜ ವೃದ್ಧಿಸುವ ಮತ್ತು ಕೆಲವು ನಿಯಂತ್ರಣ ಚಟುವಟಿಕೆಗಳನ್ನು ಖಾಸಗಿ ವಲಯಕ್ಕೆನಿಯೋಜಿಸಲು (“ಮಾನ್ಯತೆ”) OECDಯಿಂದ
ಮಾರ್ಗಸೂಚಿಗಳನ್ನು ನೀಡಲಾಗುತ್ತದೆ.

5. OECD ಬೀಜ ಯೋಜನೆಗಳ ಕಾರ್ಯಚರಣೆ :

a. ಅಂತರರಾಷ್ಟ್ರೀಯ ಪ್ರಮಾಣೀಕರಣದಯಶಸ್ಸು ಭಾಗವಹಿಸುವ ಪ್ರತಿಯೊಬ್ಬದೇಶದಲ್ಲಿ ನಿರ್ವಹಿಸುವವರು, ಬೀಜಉತ್ಪಾದಕರು, ವ್ಯಾಪಾರಿಗಳು ಮತ್ತು
ಗೊತ್ತುಪಡಿಸಿದ ಪ್ರಾಧಿಕಾರ (ಸರ್ಕಾರದಿಂದ ನೇಮಿಸಲ್ಪಟ್ಟ) ನಡುವಿನ ನಿಕಟಕಾರ್ಯಾಚರಣೆಯ ಮೇಲೆ ಅವಲಂಬಿತವಾಗಿರುತ್ತದೆ.ಈ ಯೋಜನೆಯು ಬಹು
ಪಾಲುದಾರರರು ಆಗಾಗ್ಗೆ ಸಭೆ ಸೇರಿ ಮಾಹಿತಿಯನ್ನು ವಿನಿಮಯ ಮಾಡಿಕೊಳ್ಳಲು, ಕೇಸ್ ಸ್ಟಡೀಸ್ ಹೊಸ ನಿಯಮವನ್ನು ಸಿದ್ದಪಡಿಸಲು ಮತ್ತು ಯೋಜನೆಗಳನ್ನು
ನವೀಕರಿಸಲು ಅವಕಾಶ ಮಾಡಿಕೊಡುತ್ತದೆ. UN ಕುಟುಂಬ ಸಂಸ್ಥೆಗಳು, ವ್ಯಾಪಕ ಶ್ರೇಣಿಯ ಸರ್ಕಾರೇತರ ಸಂಸ್ಥೆಗಳು (International Union for the
Protection of New Varieties of Plants (UPOV), ISTA & International Seed Federation (IFS),  ಇತ್ಯಾದಿ.) ಮತ್ತು ಬೀಜ ಉದ್ಯಮದ
ಜಾಲಗಳು ಯೋಜನೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುತ್ತವೆ.
6. ಯೋಜನೆಗಳ ಪ್ರಯೋಜನೆಗಳು
1. ಜಾಗತಿಕವಾಗಿ ಗುರುತಿಸಲ್ಪಟ್ಟ OECD ಲೇಬಲ್‍ಗಳು ಮತ್ತು ಪ್ರಮಾಣೀಕರಣವನ್ನು ಬಳಸಿಕೊಂಡು ಅಂತರರಾಷ್ಟ್ರೀಯ ವ್ಯಾಪಾರವನ್ನು ಸುಲಭಗೊಳಿಸಲು
ಅನುಕೂಲವಾಗುತ್ತದೆ (ಉದಾ: ಯುರೋಪಿಗೆ ಬೀಜಗಳನ್ನು ರಫ್ತು ಮಾಡುವಅಗತ್ಯವಿದ್ದಾಗ).
2. ದೇಶಗಳು ಅಥವಾ ಕಂಪನಿಗಳೊಂದಿಗೆ ಬೀಜ ಉತ್ಪಾದನೆಯನ್ನು ಅಭಿವೃದ್ಧಿಪಡಿಸಲು ಒಂದು ಚೌಕಟ್ಟನ್ನು ನಿರ್ಮಿಸುವುದು.
3. ಬೀಜ ಪ್ರಮಾಣೀಕರಣಕ್ಕಾಗಿ ಅಂತರರಾಷ್ಟ್ರೀಯ ನಿಯಮಗಳ ವಿಸ್ತರಣೆಯಲ್ಲಿ ಭಾಗವಹಿಸುವುದು.
4. ಸಾರ್ವಜನಿಕ ಮತ್ತು ಖಾಸಗಿ ವಲಯಗಳ ನಡುವೆ ಸಹಯೋಗವನ್ನು ಅಭಿವೃದ್ಧಿಪಡಿಸುವುದು.
5. ಇತರರಾಷ್ಟ್ರೀಯ ಪ್ರಮಾಣೀಕರಣ ಸಂಸ್ಥೆಗಳು ಮತ್ತು ವೀಕ್ಷಕ ಸಂಸ್ಥೆಗಳೊಂದಿಗೆ ನಿಯಮಿತವಾಗಿ ಮಾಹಿತಿಯ ವಿನಿಮಯದಿಂದ ಲಾಭ ಪಡೆಯುವುದು.
6. ತಾಂತ್ರಿಕ ಅಡೆತಡೆಗಳನ್ನು ಕಡಿಮೆ ಮಾಡಲು ಪಾರದರ್ಶಕತೆಯನ್ನು ಸುಧಾರಿಸಲು ಮತ್ತು ವಹಿವಾಟು ವೆಚ್ಚವನ್ನು ಕಡಿಮೆ ಮಾಡಲು ಇಡೀ ಚೌಕಟ್ಟನ್ನು
ವಿನ್ಯಾಸಗೊಳಿಸಲಾಗಿದೆ.
7. OECD ಬೀಜಯೋಜನೆಯ ನಿಯಮಗಳು ಮತ್ತು ನಿರ್ದೇಶನಗಳು
a. 1958 ರಿಂದ OECD ಬೀಜ ಯೋಜನೆಗಳು OECD ದೇಶಗಳಿಗೆ ಮತ್ತು ಇತರ ಯುಎನ್ ಸದಸ್ಯರಿಗೆ ಮುಕ್ತವಾಗಿವೆ, 61 ದೇಶಗಳು ಭಾಗವಹಿಸುತ್ತವೆ.
OECD ಪ್ರಮಾಣೀಕರಣವು Distinctness, ಏಕರೂಪತೆ ಮತ್ತು ಸ್ಥಿರತೆ (DUS) ಸ್ಥಿತಿಗಳು, ಕೃಷಿ ಮೌಲ್ಯವನ್ನು ಹೊಂದಿರುವ ಗುಣಗಳನ್ನು
ತೃಪ್ತಿಪಡಿಸುವ ಬೀಜ ತಳಿಗಳಿಗೆ ಅನ್ವಯಿಸುತ್ತದೆ ಮತ್ತು ಈ ತಳಿಗಳನ್ನು ಅಧಿಕೃತ ಪಟ್ಟಿಗಳಲ್ಲಿ ಪ್ರಕಟಿಸಲಾಗಿದೆ.
b. OECD ಪ್ರಮಾಣೀಕರಣಕ್ಕೆ ವಾರ್ಷಿಕ ಪ್ರಭೇದಗಳ ಪಟ್ಟಿಯಲ್ಲಿ 200 ಜಾತಿಗಳಿಂದ ಸುಮಾರು 42000 ತಳಿಗಳು ಅರ್ಹವಾಗಿವೆ.
c. OECDಯು ಬೀಜ ತಳಿಗಳ ಗುರುತು ಮತ್ತು ಶುದ್ದತೆಯನ್ನು ಸೂಕ್ತವಾದ ಅವಶ್ಯಕತೆಗಳು ಮತ್ತು ನಿಯಂತ್ರಣಗಳ ಮೂಲಕ ಬೆಳೆಯ ಹಂತ, ಬೀಜ ಸಂಸ್ಕರಣೆ
ಮತ್ತು ಲೇಬಲ್‍ಗಳ ಕಾರ್ಯಗಳಾದ್ಯಂತ ಖಚಿತಪಡಿಸುತ್ತದೆ.
d. OECD ಪ್ರಮಾಣೀಕರಣವು “ಗುಣಮಟ್ಟದ-ಖಾತರಿಪಡಿಸಿದ” ಬೀಜವನ್ನು ಅಧಿಕೃತವಾಗಿ ಗುರುತಿಸಲು ಅನುಕೂಲವಾಗುತ್ತದೆ. ಹೀಗಾಗಿ ಅಂತರರಾಷ್ಟ್ರೀಯ ವ್ಯಾಪಾರಕ್ಕೆ
ಅನುಕೂಲವಾಗುತ್ತದೆ. ಮತ್ತು ತಾಂತ್ರಿಕ ವ್ಯಾಪಾರ ಅಡೆತಡೆಗಳನ್ನು ತೆಗೆದುಹಾಕಲು ಸಹಕರಿಸುತ್ತದೆ.

8. OECD ಬೀಜ ಯೋಜನೆಗಳಲ್ಲಿ ಭಾರತ ಸರ್ಕಾರದ ಭಾಗವಹಿಸುವಿಕೆ
   a. ಭಾರತ ಸರ್ಕಾರ, ಕೃಷಿ ಸಚಿವಾಲಯ, ಕೃಷಿ ಮತ್ತು ಸಹಕಾರ ಇಲಾಖೆ OECD ಬೀಜ ಯೋಜನೆಗಳ ಸದಸ್ಯತ್ವಕ್ಕಾಗಿOECD ಪ್ರಧಾನ ಕಾರ್ಯದರ್ಶಿಗೆ
2007 ರ ಸೆಪ್ಟೆಂಬರ್ 21 ರಂದು Formal ಅರ್ಜಿಯನ್ನು ಸಲ್ಲಿಸಲಾಗಿತ್ತು.
b. ತರುವಾಯ OECD ಮೌಲ್ಯ ಮಾಪನ ಮಿಷನ್ ಏಪ್ರಿಲ್, 2008 ರಲ್ಲಿ ಭಾರತಕ್ಕೆ ಭೇಟಿ ನೀಡಿತು; 2008ರ ಜೂನ್‍ನಲ್ಲಿ ಚಿಕಾಗೋದಲ್ಲಿ ನಡೆದ
ವಾರ್ಷಿಕ ಸಭೆಯಲ್ಲಿ ಭಾರತದ ನಿಯೋಗ ಭಾಗವಹಿಸಿ ದೇಶದ ಬೀಜ ಉದ್ಯಮ ಮತ್ತು ಬೀಜ ಪ್ರಮಾಣೀಕರಣ ವ್ಯವಸ್ಥೆಯ ಸ್ಥಾನಮಾನವನ್ನು ಪ್ರಸ್ತುತಪಡಿಸಿತು.
OECD ಕೌನ್ಸಿಲ್ ಭಾರತದ ಅರ್ಜಿಯನ್ನು ಒಪ್ಪಿಸಿಕೊಂಡು 2008ರ ಅಕ್ಟೋಬರ್‍ನಲ್ಲಿ ಅನುಮೋದನೆ ನೀಡಿತು.
c. ಅದರ ಪ್ರಕಾರ, OECD ಬೀಜ ಯೋಜನೆಗಳಲ್ಲಿ ಭಾಗವಹಿಸಲು ಭಾರತ ಸದಸ್ಯ ರಾಷ್ಟ್ರವಾಯಿತು ಮತ್ತು OECD ಸಭೆಯಲ್ಲಿ ಪಾಲ್ಗೊಳ್ಳಲು ಬಹುಪಕ್ಷೀಯ
ವೇದಿಕೆಯಲ್ಲಿ ಚರ್ಚಿಸಲು ಮತ್ತು ಬೀಜ ತಳಿಗಳ ಪ್ರಮಾಣೀಕರಣಗಳಲ್ಲಿ ದೇಶದ ನಿಲುವನ್ನು ವ್ಯಕ್ತಪಡಿಸಲು ಅರ್ಹರಾದರು.
ಭಾರತವು ಈ ಕೆಳಗಿನ ಐದು ಬೀಜ ಯೋಜನೆಗಳಲ್ಲಿ ಭಾಗವಹಿಸಲು OECD ಕೌನಿಲ್ಸ್ ಅಕ್ಟೋಬರ್ 2008 ರಲ್ಲಿ ಒಪ್ಪಿಗೆ ನೀಡಿತು. 
  1. ಏಕದಳ ಬೀಜಗಳು
2. ಮೆಕ್ಕೆಜೋಳ ಮತ್ತು ಜೋಳ ಬೀಜಗಳು
3. Crucifers and other oil or fiber species seed
4. ಹುಲ್ಲು ಮತ್ತು ದ್ವಿದಳ ಧಾನ್ಯಗಳ ಬೀಜಗಳು
5. ತರಕಾರಿ ಬೀಜಗಳು

9. ರಾಷ್ಟ್ರೀಯ ನಿಯೋಜಿತ ಪ್ರಾಧಿಕಾರದ (NDA) ಅಧಿಯೋಜನೆ:
ಭಾರತ ಸರ್ಕಾರದ ಜಂಟಿ ಕಾರ್ಯದರ್ಶಿ ಇವರು ಬೀಜ ವಿಭಾಗ, ಕೃಷಿ ಸಚಿವಾಲಯ, ಕೃಷಿ ಮತ್ತು ಸಹಕಾರ ಇಲಾಖೆ ಇವರನ್ನು OECD ಯ ರಾಷ್ಟ್ರೀಯ
ನಿಯೋಜಿತ ಪ್ರಾಧಿಕಾರವೆಂದು ಮತ್ತು ಇವರು ಭಾರತದಲ್ಲಿ OECD ಯೋಜನೆಯ ಅನುಷ್ಠಾನಕ್ಕೆ ಜವಾಬ್ದಾರರಾಗಿರುತ್ತಾರೆಂದು ಅಧಿಸೂಚನೆಯನ್ನು ಹೊರಡಿಸಲಾಯಿತು.
10. Designated Authority(DA) ಅಧಿಸೂಚನೆ:
ರಾಷ್ಟ್ರೀಯ ನಿಯೋಜಿತ ಪ್ರಾಧಿಕಾರದಿಂದ ತಾಂತ್ರಿಕ ಮತ್ತು ಆಡಳಿತಾತ್ಮಕ ಸೌಲಭ್ಯಗಳ ಆಧಾರದ ಮೇಲೆ ಆರಂಭದಲ್ಲಿ 10 ರಾಜ್ಯ ಬೀಜ ಪ್ರಮಾಣೀಕರಣ
ಏಜೆನ್ಸಿಗಳನ್ನು OECD ಬೀಜ ಪ್ರಮಾಣೀಕರಣವನ್ನು ಕೈಗೊಳ್ಳಲು Designated Authorityಯೆಂದು ನಾಮನಿರ್ದೇಶನ ಮಾಡಲಾಯಿತು.
ಭಾರತದಲ್ಲಿ OECD ಬೀಜ ತಳಿಗಳ ಪ್ರಮಾಣೀಕರಣ ವ್ಯವಸ್ಥೆಗೆ ಆಂಗಳು ಜವಾಬ್ದಾರರಾಗಿರುತ್ತಾರೆ. ಈಗ ಐದರ ಬದಲು ಒಂಬತ್ತು Designated Authorityಯೆಂದು 
ನಾಮನಿರ್ದೇಶನ ಮಾಡಲಾಗಿರುತ್ತದೆ. ಭಾರತದಲ್ಲಿ OECD ಬೀಜ ಯೋಜನೆಗಳ ಅಡಿಯಲ್ಲಿ ಬೀಜ ತಳಿಗಳ ಪ್ರಮಾಣೀಕರಣವನ್ನು ಕೈಗೊಳ್ಳಲು
ನಾಮನಿರ್ದೇಶನಗೊಂಡಿರುವ ಒಂಬತ್ತು DAಗಳ ಪಟ್ಟಿ ಕೆಳಗಿನಂತಿದೆ.

ಹುದ್ದೆ ಪ್ರಾಧಿಕಾರ ಮತ್ತು OECD ಪ್ರಮಾಣೀಕರಣದ ವ್ಯಾಪ್ತಿಯ ಪ್ರದೇಶ
ಕ್ರ. 
ಸಂ.
 DA ಹೆಸರು ಮತ್ತು ವಿಳಾಸ 
ಕೋಡ್ 
ಕಾರ್ಯವ್ಯಾಪ್ತಿಯ ಪ್ರದೇಶ

1

ಆಂದ್ರ ಪ್ರದೇಶ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ,
ಗುಂಟೂರು

AP

ಆಂಧ್ರಪ್ರದೇಶ ಮತ್ತುಒಡಿಸ್ಸಾ

2

ಬಿಹಾರ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ, 
ಪಾಟ್ನ

BH

ಬಿಹಾರ್, ಜಾರ್ಕಾಂಡ್, ಪಶ್ಚಿಮ ಬಂಗಾಳ, 
ಅಂಡಮಾನ್& ನಿಕೋಬಾರ್, ಈಶಾನ್ಯ
ರಾಜ್ಯಗಳು
ಮತ್ತು ಸಿಕ್ಕಿಂ

3

ಮಹಾರಾಷ್ಟ್ರ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ, 
ಅಕೋಲ

MH

ಮಹಾರಾಷ್ಟ್ರ, ಗುಜರಾತ್, ದಾಮಾನ್& ದಿಯು, 
ದಾದ್ರ&
ನಗರ ಹಾವೇಲಿ ಮತ್ತು ಗೋವಾ

4

ತೆಲಂಗಾಣ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ 
ಸಂಸ್ಥೆ,
ಹೈದರಾಬಾದ್

TL

ತೆಲಂಗಾಣ ಮತ್ತು ಛತ್ತೀಸ್‍ಗಡ್

5

ರಾಜಸ್ತಾನ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ 
ಸಂಸ್ಥೆ,
ಜೈಪುರ

RJ

ರಾಜಸ್ತಾನ, ಹರಿಯಾಣ, ಪಂಜಾಬ್, 
ಚಂಡಿಗಡ ಮತ್ತು
ಮಧ್ಯಪ್ರದೇಶ

6

ಉತ್ತರಾಖಾಂಡ್ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ, 
ಡೆಹ್ರಾಡೂನ್

UK

ಉತ್ತರಾಖಾಂಡ್, ನವದೆಹಲಿ,
ಹಿಮಾಚಲಪ್ರದೇಶ
ಮತ್ತು ಜಮ್ಮು
& ಕಾಶ್ಮೀರ

7

ಉತ್ತರಪ್ರದೇಶ ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆ, 
ಲಕ್ನೊ

UP

ಉತ್ತರಪ್ರದೇಶ

8

ಬೀಜ ಮತ್ತು ಸಾವಯವ ಪ್ರಮಾಣೀಕರಣ ನಿರ್ದೇಶನಾಲಯ, 
ಕೋಯಮತ್ತೂರು

TN

ತಮಿಳುನಾಡು ಮತ್ತು ಪುದುಚೆರಿ

9

ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣೀಕರಣ 
ಸಂಸ್ಥೆ,ಬೆಂಗಳೂರು

KA

ಕರ್ನಾಟಕ


ರಾಜ್ಯ ಬೀಜ ಪ್ರಮಾಣೀಕರಣ ಸಂಸ್ಥೆಗಳು Designated Authority ಸೂಚಿಸದ ರಾಜ್ಯ ಬೀಜ ಪ್ರಮಾಣೀಕರಣ ಏಜೆನ್ಸಿಗಳು ಆಯಾ ರಾಜ್ಯಗಳಲ್ಲಿ OECD ಬೀಜ
ತಳಿಗಳ ಪ್ರಮಾಣೀಕರಣ ಚಟುವಟಿಕೆಗಳನ್ನು ಕೈಗೊಳ್ಳಲು ಮೇಲೆ ತಿಳಿಸಿದಂತೆ NDA ಸೂಚಿಸಿದ ಸಂಬಂಧಿತ DAಗೆ ಸಹಾಯ ಮಾಡಬೇಕು.
11. ಆಂಗಳ ಜವಾಬ್ದಾರಿಗಳು ಈ ಕೆಳಗಿನಂತಿವೆ.
i. OECDಯಲ್ಲಿ ಪಟ್ಟಿ ಮಾಡಬೇಕಾದ ಬೀಜ ತಳಿಗಳನ್ನು ರಾಷ್ಟ್ರೀಯ ಅಧಿಕೃತ ಕ್ಯಾಟಲಾಗ್‍ನಲ್ಲಿ ನೋಂದಾಯಿಸಲಾಗಿದೆಯೆಂದು ಖಚಿತಪಡಿಸಿಕೊಳ್ಳುವುದು.
ii. ಬೀಜ ತಳಿಗಳ ನಿರ್ವಹಣೆಗೆ ಕಾರಣವಾದ ವ್ಯಕ್ತಿಗಳು ಅಥವಾ ಸಂಸ್ಥೆಗಳ ಹೆಸರನ್ನು ಸಂವಹನ ಮಾಡುವುದು.
iii. ಬೀಜ ತಳಿಗಳನ್ನು ನಿರ್ವಹಿಸುವವರೊಂದಿಗೆ ಸಂಪರ್ಕ ಸಾಧಿಸುವುದು.
iv. ನೋಂದಣಿ ದೇಶದ ಹೊರಗೆ ಬೀಜವನ್ನು ವೃದ್ಧಿಸಲು ಸೂಕ್ತ ಗೊತ್ತುಪಡಿಸಿದ ಪ್ರಾಧಿಕಾರಕ್ಕೆ ಲಿಖಿತ ಒಪ್ಪಂದವನ್ನು ಒದಗಿಸುವುದು.
v. ವೃದ್ಧಿಸಬೇಕಾದ ತಳಿಗಳ ಅಧಿಕೃತ ಬೀಜ ಮಾದರಿಯನ್ನು ಅoಟಿಣಡಿoಟ Control plotನಲ್ಲಿ ಅಧಿಕೃತ ಡಿeಜಿeಡಿeಟಿಛಿe ಆಗಿ ಬಿತ್ತನೆ ಮಾಡುವುದು
vi. ವೃದ್ಧಿಸಬೇಕಾದ ಬೀಜ ತಳಿಗಳ ಅಧಿಕೃತ ವಿವರಣೆಯನ್ನು ಒದಗಿಸುವುದು.
vii. ವೃದ್ಧಿಸಬೇಕಾದ ಬೀಜದ ಗುರುತನ್ನು ದೃಢೀಕರಿಸುವುದು.

12. OECD ಬೀಜ ಪ್ರಮಾಣೀಕರಣಕ್ಕೆ ಅರ್ಹವಾದ ಭಾರತೀಯ ಬೆಳೆ ತಳಿಗಳ ಪಟ್ಟಿ
ಭಾರತದಿಂದ 24 ಬೆಳೆಗಳಲ್ಲಿ 231 ಬೀಜ ತಳಿಗಳನ್ನು OECD ಪ್ರಮಾಣೀಕರಣಕ್ಕೆ ಅರ್ಹವಾಗಿದೆಯೆಂದು OECD ಪಟ್ಟಿಯಲ್ಲಿ ಸೇರಿಸಲಾಗಿದೆ.
OECD ಬೀಜ ತಳಿಗಳ ಪಟ್ಟಿಯಲ್ಲಿ ಸೇರ್ಪಡೆಗೊಂಡಿರುವ ಭಾರತೀಯ ತಳಿಗಳ ವಿವರವಾದ ಪಟ್ಟಿ, OECD ಬೀಜ ಯೋಜನೆಯ ವರ್ಗೀಕರಣದ
ಆಧಾರದ ಮೇಲೆ ಅರ್ಹ ತಳಿಗಳ ಪ್ರಮುಖಚಿಹ್ನೆ, ನಿರ್ವಹಿಸುವವರ ಹೆಸರು ಮತ್ತು ವಿಳಾಸಗಳು, ತಳಿಗಳ Morphological ವಿವರಣೆ, Parents & Hybrid
ಮತ್ತು OECD ಬೀಜ ಯೋಜನೆಯಡಿ ಅರ್ಹ ತಳಿಗಳ ಹಿನ್ನೆಲೆ ವಿವರಗಳು Handbook of OECD varietal Certification in India ಇದರಲ್ಲಿ ಲಭ್ಯವಿದೆ.

ಒಇಡಿಸಿ ಹ್ಯಾಂಡ್‌ಬುಕ್ ಡೌನ್‌ಲೋಡ್ ಮಾಡಲು ಇಲ್ಲಿ ಕ್ಲಿಕ್ ಮಾಡಿ

ಇತ್ತೀಚಿನ ನವೀಕರಣ​ : 01-02-2023 03:07 PM ಅನುಮೋದಕರು: Approver kssoca


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080