ಸಾವಯವ ಕಾಡು ಸಂಗ್ರಹ

ಅರಣ್ಯ ಉತ್ಪನ್ನಗಳ ಸಂಗ್ರಹಣೆಯ ಪ್ರಮಾಣೀಕರಣ
  1. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಪರಿಸರಕ್ಕೆ ದಕ್ಕೆಯಾಗದಂತೆ ಪೂರಕವಾಗಿರಬೇಕು.
  2. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ನೈಸರ್ಗಿಕ ಸಮತೋಲನ ಹಾಗೂ ಪರಿಸರ ಸುಸ್ಥಿರತೆ ಕಾಪಾಡಲು ಒತ್ತು ನೀಡಬೇಕು. 
  3. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸುವಾಗ ಪರಿಸರದಲ್ಲಿರುವ ಸಸ್ಯ ಹಾಗೂ ಜೀವ ಸಂಕುಲಕ್ಕೆ ಯಾವುದೇ ಹಾನಿ ಉಂಟುಮಾಡಬಾರದು.
  4. ಅರಣ್ಯ ಉತ್ಪನ್ನಗಳನ್ನು ಸ್ಪಷ್ಟವಾಗಿ ಗುರುತಿಸಿದ ದೃಢ (Stable) ಮತ್ತು ಸುಸ್ಥಿರ (Sustainable) ಪ್ರದೇಶದಲ್ಲಿ ಸಂಗ್ರಹಣೆ ಮಾಡಬೇಕು.
  5. ಅರಣ್ಯ ಉತ್ಪನ್ನಗಳ ಸಂಗ್ರಹಣಾ ಪ್ರದೇಶವು ಕಲುಷಿತ/ಮಾಲಿನ್ಯ/ನಿಷೇಧಾತ್ಮಕ ಪ್ರದೇಶದಿಂದ ದೂರವಿರಬೇಕು ಮತ್ತು ಪರಿವೀಕ್ಷಣೆಗೆ ಯೋಗ್ಯವಾಗಿರಬೇಕು.
  6. ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಸಕ್ಷಮ ಪ್ರಾಧಿಕಾರದಿಂದ ಅನುಮತಿ ಪಡೆದ ಪತ್ರವನ್ನು ಪ್ರಮಾಣನ ಸಂಸ್ಥೆಗೆ ನೀಡಬೇಕು.
  7. ಅರಣ್ಯ ಉತ್ಪನ್ನಗಳ ಸಂಗ್ರಹಣಾ ಪ್ರದೇಶದ ನೀಲಿ ನಕ್ಷೆಯನ್ನು ಪ್ರಮಾಣನ ಸಂಸ್ಥೆಗೆ ನೀಡಬೇಕು.

ಪ್ರಮಾಣೀಕರಣಕ್ಕಾಗಿ ನೋದಾಯಿಸಲು ಬೇಕಾಗುವ ದಾಖಲಾತಿಗಳು

  •  PAN ಕಾರ್ಡ್‍ ಇರಬೇಕು

  • ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
  • ಅರಣ್ಯ ಉತ್ಪನ್ನಗಳನ್ನು ಸಂಗ್ರಹಿಸಲು ಸಕ್ಷಮ ಪ್ರಾಧಿಕಾರದ ಅನುಮತಿ ಪತ್ರ 
  • ಅರಣ್ಯ ಉತ್ಪನ್ನಗಳ ಸಂಗ್ರಹಣಾ ಪ್ರದೇಶದ ನೀಲಿ ನಕ್ಷೆ
  • ಪೋಟೊ
  • KSOCA ಕಛೇರಿಯಿಂದ ಅರಣ್ಯ ಉತ್ಪನ್ನಗಳ ಸಂಗ್ರಹಣಾ ಸ್ಥಳಕ್ಕೆ ಹೋಗಲು ರಸ್ತೆಯ ನಕ್ಷೆ (Route Map) & ದೂರ (ಕಿ.ಮೀ)

 

ಇತ್ತೀಚಿನ ನವೀಕರಣ​ : 29-06-2020 04:02 PM ಅನುಮೋದಕರು: Approver kssoca