ಸಾವಯವ ಕೃಷಿ ಪರಿಕರಗಳ ಅನುಮೋದನೆ

ಸಾವಯವ ಕೃಷಿ ಪರಿಕರಗಳ ಅನುಮೋದನೆ
   1. ಸಾವಯವ ಕೃಷಿ ಪರಿಕರಗಳನ್ನು ಉತ್ಪಾದಿಸುವ ಕಾರ್ಯವಿಧಾನವನ್ನು ಸ್ಪಷ್ಟವಾಗಿ ಬರವಣಿಗೆಯಲ್ಲಿ ನೀಡಬೇಕು.
   2. ಕೃಷಿ ಪರಿಕರಗಳ ಉತ್ಪಾದನ ಘಟಕವು ಕಲುಷಿತ ಮುಕ್ತವಾಗಿರಬೇಕು.
   3. ಉತ್ಪಾದನೆಯಲ್ಲಿ ಬಳಸುವ ಎಲ್ಲಾ ಪದಾರ್ಥಗಳು ಸಾವಯವ ಪ್ರಮಾಣಿತ ಮೂಲದ್ದಾಗಿರಬೇಕು. 
   4. ಉತ್ಪನ್ನಗಳ ಶೇಖರಣೆ ಹಾಗೂ ಸಾಗಾಣಿಕೆ ಕಲುಷಿತ ಮುಕ್ತವಾಗಿರಬೇಕು.
   5. ಮೇಲಿನ ಎಲ್ಲಾ ಚಟುವಟಿಕೆಗಳ ಖರೀದಿ ಮತ್ತು ಮಾರಾಟದ ರಸೀದಿಗಳು ಹಾಗೂ ಇತರೆ ದಾಖಾಲಾತಿಗಳನ್ನು ಸಮರ್ಪಕವಾಗಿ ನಿರ್ವಹಿಸಬೇಕು.
   6. ಪರಿಕರಗಳ ಉತ್ಪಾದನಾ ಘಟಕದ ನಕ್ಷೆಯನ್ನು ನೀಡಬೇಕು

ಕೃಷಿ ಪರಿಕರಗಳ ಅನುಮೋದನೆಗೆ ನೋಂದಾಯಿಸಲು ಬೇಕಾಗುವ ದಾಖಲಾತಿಗಳು
   • ಕಾನೂನಾತ್ಮಕವಾಗಿ ಪರಿಕರಗಳ ಘಟಕವು ನೊಂದಣಿಯಾಗಿರುವುದರ ಬಗ್ಗೆ ದಾಖಲಾತಿ
   • ಪರಿಕರಗಳ ಘಟಕದ ಹೆಸರಿನಲ್ಲಿ PAN ಕಾರ್ಡ್ ಇರಬೇಕು
   • ಪರಿಕರಗಳ ಘಟಕದ ಜವಾಬ್ದಾರಿಯುತ ವ್ಯಕ್ತಿಯ ಆಧಾರ್ ಕಾರ್ಡ್ ಜೆರಾಕ್ಸ್ ಪ್ರತಿ
   • ಪರಿಕರಗಳ ಘಟಕದ ಜವಾಬ್ದಾರಿಯುತ ವ್ಯಕ್ತಿಯ ಪೋಟೊ
   • ಸಾವಯವ ಕೃಷಿ ಪರಿಕರಗಳನ್ನು ಉತ್ಪಾದಿಸುವ ಕಾರ್ಯವಿಧಾನ 
   • ಕೃಷಿ ಪರಿಕರಗಳ ಉತ್ಪಾದನೆಗಾಗಿ ಬಳಸುವ ಕಚ್ಚಾ ಪದಾರ್ಥಗಳ ಮೂಲದ ಬಗ್ಗೆ ದಾಖಲಾತಿ 
   • KSOCA ಕಛೇರಿಯಿಂದ ಕೃಷಿ ಪರಿಕರಗಳ ಉತ್ಪಾದನಾ ಘಟಕಕ್ಕೆ ಹೋಗಲು ರಸ್ತೆಯ ನಕ್ಷೆ (Route Map) & ದೂರ (ಕಿ.ಮೀ)

 

ಇತ್ತೀಚಿನ ನವೀಕರಣ​ : 29-06-2020 04:02 PM ಅನುಮೋದಕರು: Approver kssoca