ಅಭಿಪ್ರಾಯ / ಸಲಹೆಗಳು

ಸಾವಯವ ಕೃಷಿಕರ ಗುಂಪು ಪ್ರಮಾಣೀಕರಣ

KSSOCA ಯಲ್ಲಿ ರೈತರ ಗುಂಪು ಪ್ರಮಾಣೀಕರಣ

ಗುಂಪು ಪ್ರಮಾಣೀಕರಣ: ಐಸಿಎಸ್ ಒಂದು ಗುಣಮಟ್ಟದ ವ್ಯವಸ್ಥೆಯಾಗಿದ್ದು, ಆಂತರಿಕ ತಪಾಸಣೆ ಮತ್ತು ಅನುಮೋದನೆಯೊಂದಿಗೆ ವ್ಯವಹರಿಸುವ ಕಿರು ಪ್ರಮಾಣೀಕರಣ ಸಂಸ್ಥೆಯಾಗಿ ಕಾರ್ಯ ನಿರ್ವಹಿಸುತ್ತಿದೆ. ಇದರಲ್ಲಿ ಆಂತರಿಕ ಗುಣಮಟ್ಟ ವ್ಯವಸ್ಥಾಪಕರು,ಆಂತರಿಕ ತನಿಖಾಧಿಕಾರಿ, ಅನುಮೋದನೆ ವ್ಯವಸ್ಥಾಪಕ ಮತ್ತು ಸಮಿತಿ, ಕ್ಷೇತ್ರ ಅಧಿಕಾರಿಗಳು, ಖರೀದಿ ಅಧಿಕಾರಿಗಳು ಸಂಗ್ರಹಾಣಾ ಮತ್ತು ಶೇಖರಣಾ ಅಧಿಕಾರಿಗಳು ಕಾರ್ಯ ನಿರ್ವಹಿಸುತ್ತಾರೆ. ಇದು ಉತ್ಪಾದಕರ ಗುಂಪುಗಳು, ರೈತ ಸಹಕಾರ ಸಂಘಗಳು, ಸಂಸ್ಕರಣಾ ಘಟಕಗಳು ಇತ್ಯಾದಿಗಳಿಗೆ ಅನ್ವಯಿಸುತ್ತದೆ.

 

ಗುಂಪು ಪ್ರಮಾಣೀಕರಣದ ಅನುಕೂಲಗಳು:

 1. ಸಣ್ಣ ಹಾಗೂ ಅತಿ ಸಣ್ಣ ರೈತರಿಗೆ ಗುಂಪಿನಲ್ಲಿ ಪ್ರಮಾಣೀಕರಣ ಮಾಡಿಸುವುದರಿಂದ ಪ್ರಮಾಣೀಕರಣ ವೆಚ್ಚವು ಕಡಿಮೆಯಾಗುತ್ತದೆ.
 2. ಗುಂಪು ಪ್ರಮಾಣೀಕರಣದಿಂದ ಹೆಚ್ಚಿನ ತರಬೇತಿಯನ್ನು ಪಡೆದು ಕೊಳ್ಳುವುದರ ಮೂಲಕ ಆಧುನಿಕ ಹಾಗೂ ಸುಧಾರಿತ ಕೃಷಿ ತಂತ್ರಜ್ಞಾನಗಳನ್ನು ತಿಳಿದುಕೊಳ್ಳಬಹುದು.
 3. ಗುಂಪಿನಲ್ಲಿರುವ ರೈತರು ಸಾವಯವ ಕೃಷಿ ಉತ್ಪನ್ನಗಳಿಗೆ ತಗಲುವ ಸಂಸ್ಕರಣಾ ವೆಚ್ಚವನ್ನು ಕಡಿಮೆ ಮಾಡಬಹುದಲ್ಲದೆ, ಸಂಸ್ಕರಣಾ ಸೌಲಭ್ಯವನ್ನು ಸುಲಭವಾಗಿ ಪಡೆದುಕೊಳ್ಳಬಹುದು.
 4. ರಫ್ತುದಾರರು ಅಥವಾ ಮಾರಾಟಗಾರರಿಗೆ ಸಾವಯವ ಕೃಷಿ ಉತ್ಪನ್ನಗಳ ನಿರ್ಧಿಷ್ಟ ಪ್ರದೇಶದಲ್ಲಿ ಹೆಚ್ಚಿನ ಪ್ರಮಾಣದಲ್ಲಿ ಲಭ್ಯವಾಗುವುದರಿಂದ ಗುಂಪಿನಲ್ಲಿರುವ ಸದಸ್ಯರಿಗೆಉತ್ತಮ ಮಾರುಕಟ್ಟೆ ದರ ದೊರೆಯುವುದಲ್ಲದೇ ಉತ್ಪನ್ನಗಳನ್ನು ಸುಲಭವಾಗಿ ಮಾರಾಟ ಮಾಡಬಹುದಾಗಿರುತ್ತದೆ.

ಗುಂಪು ಪ್ರಮಾಣೀಕರಣಕ್ಕೆ ಬೇಕಾಗುವ ಕನಿಷ್ಠ ಅಗತ್ಯತೆಗಳು

 1. ರೈತರ ಗುಂಪು ಕಾನೂನಾತ್ಮಕವಾಗಿ ಒಂದೇ ಅಸ್ತಿತ್ವದ ಅಡಿಯಲ್ಲಿ ನೋಂದಣಿಯಾಗಿರಬೇಕು.
 2. ಗುಂಪಿನಲ್ಲಿರುವ ರೈತರು ನಿರ್ಧಿಷ್ಟ ಭೌಗೋಳಿಕ ಪರಿಮಿತಿಯಲ್ಲಿರಬೇಕು ಹಾಗೂ ಏಕ ರೀತಿಯ ಉತ್ಪಾದನಾ ಪದ್ಧತಿಯನ್ನು ಅನುಸರಿಸುತ್ತಿರಬೇಕು.
 3. ಒಂದು ಗುಂಪಿನಲ್ಲಿ ಕನಿಷ್ಠ 25 ಗರಿಷ್ಠ 500 ರವರೆಗೆ ಸದಸ್ಯರು ಇರಬಹುದು.
 4. ಬಾಹ್ಯ ನಿರೀಕ್ಷಣಾ ಸಂಸ್ಥೆಯು ನಿರೀಕ್ಷಣೆ ಕೈಗೊಳ್ಳುವ ಮೊದಲು ಆಂತರಿಕ ನಿರೀಕ್ಷಕರು ಎಲ್ಲಾ ಕ್ಷೇತ್ರಗಳ ನಿರೀಕ್ಷಣೆಯನ್ನು ಕಡ್ಡಾಯವಾಗಿ ಕೈಗೊಂಡಿರಬೇಕು.
 5. ಗುಂಪು ಪ್ರಮಾಣನ ಕಾರ್ಯ ಚಟುವಟಿಕೆಗಳನ್ನು ಯಶಸ್ವಿಯಾಗಿ ನಿರ್ವಹಿಸಲು ಈ ಕೆಳಕಂಡ ಸಿಬ್ಬಂದಿಗಳನ್ನು ನೇಮಿಸಬೇಕು.
  • ಆಂತರಿಕಗುಣಮಟ್ಟ ವ್ಯವಸ್ಥೆಯ ವ್ಯವಸ್ಥಾಪಕರು
  • ಆಂತರಿಕ ನಿರೀಕ್ಷಕರು
  • ಮಂಜೂರಾತಿ ವ್ಯವಸ್ಥಾಪಕರು/ಸಮಿತಿ
  • ಕ್ಷೇತ್ರ ಅಧಿಕಾರಿಗಳು
  • ಖರೀದಿ ಅಧಿಕಾರಿಗಳು
  • ಉಗ್ರಾಣ ವ್ಯವಸ್ಥಾಪಕರು
  • ಸಂಸ್ಕರಣಾ ವ್ಯವಸ್ಥಾಪಕರು
 1. ಗುಂಪು ಪ್ರಮಾಣೀಕರಣದಲ್ಲಿ ನಿರ್ವಹಿಸಬೇಕಾದ ದಾಖಲೆಗಳು:

          a)ಕರಾರು: ಪ್ರಮಾಣನ ಮಾನದಂಡಗಳನ್ನು ಪಾಲಿಸುವ ಬಗ್ಗೆ ಗುಂಪಿನ ಸದಸ್ಯರ ನಡುವೆ ಲಿಖಿತ ಒಪ್ಪಂದ.

 1.   b) ಸಾವಯವ ಕ್ಷೇತ್ರ ನಿರ್ವಹಣಾಯೋಜನೆ (ಬೀಜದಿಂದ ಮಾರಾಟದವರೆಗೆ):
  • ಕ್ಷೇತ್ರದಇತಿಹಾಸ
  • ಕ್ಷೇತ್ರದ ನಕ್ಷೆ
  • ರಸೀದಿಗಳು (ಖರೀದಿ/ಮಾರಾಟ)
  • ಗುಂಪು ಕ್ಷೇತ್ರಗಳ ನಕ್ಷೆ(Overview Map).
 1.    c) ಫಾರ್ಮ್ ಡೈರಿ(Farm Diary)

 

 1. ಆಂತರಿಕ ಮಾನದಂಡಗಳು: ಗುಂಪು ಪ್ರಮಾಣೀಕರಣಕ್ಕೆ ಅವಶ್ಯವಿರುವ ಆಂತರಿಕ ಮಾನದಂಡಗಳನ್ನು ಸ್ಥಳೀಯ ಭಾಷೆಯಲ್ಲಿ ಅಭಿವೃದ್ಧಿ ಪಡಿಸಿ ಅಳವಡಿಸಿಕೊಳ್ಳಬೇಕು.
 2. ಗುಂಪಿನಲ್ಲಿರುವ ರೈತರು/ಸಿಬ್ಬಂದಿಗಳಿಗೆ ಸೂಕ್ತ ತರಬೇತಿಯನ್ನು ನೀಡಬೇಕು.
 3. ಗುಂಪು ಪ್ರಮಾಣೀಕರಣದಲ್ಲಿ ಆಂತರಿಕ ನಿರೀಕ್ಷಕರು ಕನಿಷ್ಠ ವಾರ್ಷಿಕ ಎರಡು ಆಂತರಿಕ ನಿರೀಕ್ಷಣೆಗಳನ್ನು ಕೈಗೊಳ್ಳಬೇಕು
 4. ಆಂತರಿಕ ನಿರೀಕ್ಷಕರು ಪ್ರತಿ 50-60 ರೈತರಿಗೆ ಒಬ್ಬರಂತೆ ಆಂತರಿಕ ನಿರೀಕ್ಷಕಣೆಯನ್ನು ಕೈಗೊಳ್ಳಬೇಕು

 

ಗುಂಪು ಪ್ರಮಾಣೀಕರಣಕ್ಕಾಗಿ ನೋಂದಾಯಿಸಲು ಬೇಕಾಗುವ ದಾಖಲಾತಿಗಳು

 • ಕಾನೂನಾತ್ಮಕವಾಗಿ ಗುಂಪು ನೊಂದಣಿಯಾಗಿರುವುದರ ಬಗ್ಗೆ ದಾಖಲಾತಿ
 • ಗುಂಪಿನ ಹೆಸರಿನಲ್ಲಿ PAN ಕಾರ್ಡ್‍ಇರಬೇಕು
 • ಗುಂಪಿನ ಜವಾಬ್ದಾರಿಯುತ ವ್ಯಕ್ತಿಯ ಆಧಾರ್ ಕಾರ್ಡ್‍ಜೆರಾಕ್ಸ್ ಪ್ರತಿ
 • ಗುಂಪಿನ ಜವಾಬ್ದಾರಿಯುತ ವ್ಯಕ್ತಿಯ ಪೋಟೊ
 • ಗುಂಪಿನ ನಮೂದಿತ ರೈತರ ಪಟ್ಟಿ (ರೈತರ ಹೆಸರು, ತಂದೆಯ ಹೆಸರು, ಹಳ್ಳಿಯ ಹೆಸರು, ಸರ್ವೆ ನಂಬರ್, ಜಿಪಿಎಸ್‍ರಿಡಿಂಗ್ (ರೇಖಾಂಶ&ಅಕ್ಷಾಂಶ), ಕೊನೆಯದಾಗಿ ಬಳಸಬಾರದ ಪರಿಕರಗಳನ್ನು ಉಪಯೋಗಿಸಿದ ದಿನಾಂಕ, ಗುಂಪು ಮತ್ತುರೈತರ ನಡುವಿನ ಕರಾರುಒಪ್ಪಂದದ ದಿನಾಂಕ)
 • KSOCA ಕಛೇರಿಯಿಂದ ಗುಂಪಿನ ಸ್ಥಳಕ್ಕೆ ಹೋಗಲು ರಸ್ತೆಯ ನಕ್ಷೆ (Route Map) &ದೂರ (ಕಿ.ಮೀ)

 

ಇತ್ತೀಚಿನ ನವೀಕರಣ​ : 29-06-2020 04:01 PM ಅನುಮೋದಕರು: Approver kssoca


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

 • ಹಕ್ಕುಸ್ವಾಮ್ಯ ನೀತಿ
 • ಬಾಹ್ಯಜಾಲತಾಣ ಸಂಪರ್ಕ ನೀತಿ
 • ಭದ್ರತಾ ನೀತಿ
 • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

 • ಇತ್ತೀಚಿನ ನವೀಕರಣ​ :
 • ಸಂದರ್ಶಕರು :
 • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080