ಅಭಿಪ್ರಾಯ / ಸಲಹೆಗಳು

ಬೀಜ ವಿಭಾಗ (ಅಗಿಂದಾಗ್ಗೆ ಕೇಳುವ ಪ್ರಶ್ನೆಗಳು)

ಸಾಮಾನ್ಯವಾಗಿ ಕೇಳಲಾದ ಪ್ರಶ್ನೆಗಳು (ಬೀಜ ವಿಭಾಗ) :

ಪ್ರಶ್ನೆ 1) ತಳಿ ವರ್ಧಕ ಬೀಜ, ಮೂಲ ಬೀಜ ಮತ್ತು ಪ್ರಮಾಣಿತ ಬೀಜ ಎಂದರೇನು?

ಉತ್ತರ: 
ತಳಿ ವರ್ಧಕ ಬೀಜ : ತಳಿ ವರ್ಧಕ ಬೀಜವು ಬೀಜ ಅಥವಾ ಸಸ್ಯದ ಕಾಂಡದಿಂದ ನೇರವಾಗಿ ತಳಿ ವರ್ಧಕರಿಂದ ಉತ್ಪಾದಿಸುವ ತಳಿ ವರ್ಧಕ ಕಾರ್ಯಕ್ರಮ ಅಥವಾ ಸಂಸ್ಥೆ ಮತ್ತು ಅಥವಾ ಬೀಜವಾಗಿದ್ದು, ಅದರ ಉತ್ಪಾದನೆಯು ನೇರವಾಗಿ ತಳಿ ವರ್ಧಕರಿಂದ ಮಾಡಲಪಟ್ಟಿದ್ದು, ಆ ಬೀಜವನ್ನು ಮೂಲ ಬೀಜೋತ್ಪಾದನೆಗಾಗಿ ಬಳಸ ಬಹುದಾಗಿರುತ್ತದೆ. ತಳಿ ವರ್ಧಕ ಬೀಜವು ಅಂನುವಂಶೀಯವಾಗಿ ತಳಿ ಶುದ್ಧತೆಯನ್ನು ಹೊಂದಿದ್ದು, ಮುಂದಿನ ಪ್ರಮಾಣೀತ ಮೂಲ ಬೀಜೋತ್ಪಾದನೆಯಲ್ಲಿ ತಳಿ ಶುದ್ಧತೆಯು ಯಥಾವತ್ತಾಗಿರಬೇಕು. ತಳಿ ವರ್ಧಕ ಬೀಜದ ಇತರ ಗುಣಧರ್ಮಗಳಾದ ಭೌತಿಕ ಶುದ್ಧತೆ, ಜಡ ಪದಾರ್ಥಗಳು, ಮೊಳೆಯುವಿಕೆ ಮುಂತಾದವುಗಳನ್ನು ತಳಿ ವರ್ಧಕ ಚೀಟಿಯ ಮೇಲೆ ನಿಖರವಾಗಿ ನಮೂದಿಸಬೇಕು. ತಳಿ ವರ್ಧಕ ಬೀಜದ ಚೀಟಿಯು ಬಂಗಾರದ ಹಳದಿ ಬಣ್ಣದ್ದಾಗಿರುತ್ತದೆ.

ಮೂಲ ಬೀಜ: ತಳಿ ವರ್ಧಕ ಬೀಜದಿಂದ ಉತ್ಪಾದಿಸಿದ ಬೀಜವು ಮೂಲ ಬೀಜವಾಗಿರುತ್ತದೆ. ಅಥವಾ ಮೂಲ ಬೀಜದಿಂದ ಉತ್ಪಾದಿಸಿದ ಬೀಜವು ಮೂಲ ಬೀಜವಾಗಿರುತ್ತದೆ. ಆ ಮೂಲ ಬೀಜವು ಆ ತಳಿಯ ಅನುವಂಶೀಕ ಗುಣಗಳನ್ನು ಯಥಾವತ್ತಾಗಿ ಹೊಂದಿರುಬೇಕು. ಮೂಲ ಬೀಜೋತ್ಪಾದನೆಯ ಮೂಲ ಬೀಜ ಹಂತ-I ಮತ್ತು ಹಂತ–II ಕ್ಕೆ ಬೀಜ ಪ್ರಮಾಣೀಕರಣ ಮಾನದಂಡಗಳು ಒಂದೇ ಆಗಿರುತ್ತವೆ. ಮೂಲ ಬೀಜೋತ್ಪಾದನೆಯ ಹಂತ-I ಮತ್ತು ಹಂತ–IIರ ಉಸ್ತುವಾರಿಯನ್ನು ಬೀಜ ಪ್ರಮಾಣೀಕರಣ ಸಂಸ್ಥೆ ಕೈಗೊಂಡು ಬೆಳೆ/ತಳಿಗೆ ನಿರ್ಧಿಷ್ಟಪಡಿಸಿದ ಅನುವಂಶೀಯ ಗುಣಗಳೊಂದಿಗೆ ಬೀಜ ಪ್ರಮಾಣೀಕರಣ ಮಾನದಂಡಗಳನ್ನು ಹೊಂದಿರಬೇಕು. ಮೂಲ ಬೀಜ ಹಂತ–I ಮತ್ತು ಹಂತ–IIರ ಪ್ರಮಾಣನ ಚೀಟಿಗಳು ಬಿಳಿ ಬಣ್ಣದ್ದಾಗಿರುತ್ತದೆ.

ಪ್ರಮಾಣಿತ ಬೀಜ: ಮೂಲ ಬೀಜವನ್ನು ಉಪಯೋಗಿಸಿ ಉತ್ಪಾದಿಸಿದಂತೆ ಬೀಜವು ಪ್ರಮಾಣೀತ
ಬೀಜವಾಗಿರುತ್ತದೆ. ಪ್ರಮಾಣೀತ ಬೀಜವು ಬೆಳೆ/ತಳಿಗೆ ನಿರ್ಧಿಷ್ಟಪಡಿಸಿದ ಅನುವಂಶೀಯ ಗುಣ
ಧರ್ಮಗಳನ್ನು ಹೊಂದಿದ್ದು ಬೀಜ ಪ್ರಮಾಣೀಕರಣ ಮಾನದಂಡಗಳಿಗೆ ಒಳಪಟ್ಟಿರಬೇಕು. ಪ್ರಮಾಣಿತ ಬೀಜದಿಂದ ಉತ್ಪಾದಿಸಿದಂತಹ ಬೀಜವು ಸಹ ಪ್ರಮಾಣಿತ ಬೀಜವಾಗಿರುತ್ತದೆ. ಆದರೆ
ಈ ಬೀಜೋತ್ಪಾದನೆಯು ಎರಡು ವಂಶಾವಳಿಗಳನ್ನು ಮೀರಿರಬಾರದು. ಪ್ರಮಾಣಿತ ಬೀಜದ
ಪ್ರಮಾಣನಚೀಟಿಯು ನೀಲಿ ಬಣ್ಣದ್ದಾಗಿರುತ್ತದೆ.

 

ಪ್ರಶ್ನೆ (2) ಸಂಕರಣ ಬೀಜಎಂದರೇನು?
ಉತ್ತರ:ಎರಡು ಅನುಮೋದಿತ ತಳಿಗಳ ಸಂಕರಣದಿಂದ (ಅಡಿossiಟಿg) ಬರುವ ಮೊದಲನೇ ವಂಶದ ಬೀಜೋತ್ಪಾನವೇ ಸಂಕರಣ ಬೀಜ. ಸಂಕರಣ ಬೀಜೋತ್ಪಾದನೆಯಲ್ಲಿ ಹೆಣ್ಣು ತಳಿಯು ಪರಾಗ ರೇಣುಗಳನ್ನು ವಿಸರಣೆ ಮಾಡಬಾರದು. ಅಥವಾ ನಪುಂಶಕು ಪರಾಗ ರೇಣುಗಳನ್ನು ಹೊಂದಿರಬಹುದು.

 

ಪ್ರಶ್ನೆ (3) ಲೇಬಲ್ ಬೀಜ ಎಂದರೇನು?
ಉತ್ತರ: ಬೀಜಕಾಯ್ದೆ1966ರ ಸೆಕ್ಷನ್05ರ ಅಡಿಯಲ್ಲಿ ಘೋಷಣೆಯಾದಂತೆ ಬೆಳೆ/ತಳಿಗಳನ್ನು ಬೀಜಕಾಯ್ದೆಯ ಸೆಕ್ಷನ್ 6(ಚಿ) ಮತ್ತು (b)ಯ ಮಾನದಂಡಗಳನ್ನು ಪೂರೈಸಿದ ಬೀಜವನ್ನು ನಿಜಬೀಜ ಎನ್ನುತ್ತಾರೆ (Labeled Seed).

 

ಪ್ರಶ್ನೆ (4) ಬೀಜ ಪ್ರಮಾಣೀಕರಣ ವಿಧಾನ ಹೇಗೆ?
ಉತ್ತರ: ಬೀಜ ಪ್ರಮಾಣೀಕರಣವನ್ನು 06 ಹಂತಗಳಲ್ಲಿ ಕೈಗೊಳ್ಳಲಾಗುವುದು.
  • ಅರ್ಜಿಯನ್ನು ಪಡೆದು ಬೀಜದ ಮೂಲ ಪರಿಶೀಲನೆ ಮಾಡುವುದು.
  • ನಮೂನೆ-1 ಗಳನ್ನು ಪರಿಶೀಲಿಸಿ ಬಿಜೋತ್ಪಾದನಾ ತಾಕುಗಳನ್ನು ನೊಂದಾಯಿಸಿಕೊಳ್ಳವುದು.
  • ಬೀಜೋತ್ಪಾದನಾ ಕ್ಷೇತ್ರ ನಿರೀಕ್ಷಣೆ ಕೈಗೊಂಡು ಕ್ಷೇತ್ರ ಮಟ್ಟದ ಮಾನದಂಡಗಳನ್ನು ಪರೀಕ್ಷಿಸುವುದು/ಪರಿಶೀಲಿಸುವುದು.
  • ಕಟಾವು ನಂತರದ ಹಂತಗಳಾದ ಬೀಜ ಸಂಸ್ಕರಣೆ ಮತ್ತು ಸಂಸ್ಕರಿಸಿದ ಬೀಜರಾಶಿಗಳ ಬೀಜ ಮಾದರಿ ತೆಗೆಯುವುದು
  • ಬೀಜ ಮಾದರಿಗಳ ವಿಶ್ಲೇಷಣೆ, ಬೀಜದ ಮೊಳಕೆ ಪರೀಕ್ಷೆ ಭೌತಿಕ ಶುದ್ಧತೆ, ತೇವಾಂಶ ಹಾಗೂ ತಳಿ ಶುದ್ಧತಾ ಪರೀಕ್ಷೆ ಕೈಗೊಂಡು ನಿರ್ಧಿಷ್ಟ ಮಾನದಂಡಗಳನ್ನು ಖಾತ್ರಿ     ಪಡಿಸಿಕೊಳ್ಳವುದು.
  • ಪ್ರಮಾಣನ ಚೀಟಿಗಳನ್ನು ನೀಡಿ, ಪೊಟ್ಟಣೀಕರಣ ಹಾಗೂ ಪ್ರಮಾಣ ಪತ್ರ (ನಮೂನೆ-2)ನ್ನು ನೀಡುವುದು.


ಪ್ರಶ್ನೆ (5) ಯಾವ ಯಾವ ಸಂಸ್ಥೆಗಳು ಪ್ರಮಾಣೀತ ಬೀಜವನ್ನು ಉತ್ಪಾದನೆ ಮಾಡಬಹುದು?
ಉತ್ತರ: ಆಸಕ್ತಿ ಇರುವವರೆಲ್ಲರೂ ಆಯಾರಾಜ್ಯ ಬೀಜ ಪ್ರಮಾಣನ ಸಂಸ್ಥೆಯಲ್ಲಿ ನೊಂದಾಯಿಸಿಕೊಂಡು, ಅಂತಹ ನೊಂದಾಯಿತವಾದ ಬೀಜೋತ್ಪಾದನಾ ಸಂಸ್ಥೆಗಳು/ ಬೀಜೋತ್ಪಾದಕರು ಪ್ರಮಾಣಿತ ಬೀಜವನ್ನು ಉತ್ಪಾದಿಸಿಬಹುದು. ಈಗ ಸದ್ಯರಾಜ್ಯ ಬೀಜ ನಿಗಮ, ರಾಷ್ಟ್ರೀಯ ಬೀಜ ನಿಗಮ, ಕೃಷಿ ಇಲಾಖೆ, ಖಾಸಗಿ ಕಂಪನಿಗಳು, ಸಹಕಾರಿ ಸಂಸ್ಥೆಗಳು ಮತ್ತು ವೈಯಕ್ತಿಕವಾಗಿ ರೈತರು ಪ್ರಮಾಣಿತ ಬೀಜವನ್ನು ಉತ್ಪಾದಿಸುತ್ತಿದ್ದಾರೆ.

ಪ್ರಶ್ನೆ (6) ಬೀಜ ಬದಲಾವಣೆಯ ಪ್ರಮಾಣ ಎಷ್ಟು?
ಉತ್ತರ: ಒಟ್ಟು ಬಿತ್ತನೆಯಾದ ಕ್ಷೇತ್ರದಲ್ಲಿ ಪ್ರತಿಶತ ಪ್ರಮಾಣಿತ ಬೀಜ/ಗುಣಮಟ್ಟದ ಬೀಜವನ್ನು ಉಪಯೋಗಿಸಿ ಬಿತ್ತನೆಯಾದ ಕ್ಷೇತ್ರವನ್ನು ಆ ಹಂಗಾಮಿನ ಬೀಜ ಬದಲಾವಣೆಗೆ ಪ್ರಮಾಣ ಎನ್ನಬಹುದು. ಈ ಪ್ರಮಾಣವು ರೈತರ ಉಳಿಸಿ ಸಂಗ್ರಹಿಸಿದ ಬೀಜ ಹೊರತಾಗಿರುತ್ತದೆ.

ಪ್ರಶ್ನೆ (7) ಅನುವಂಶಿಕವಾಗಿ ಮಾರ್ಪಡಿಸಿದ ಬೆಳೆ / ಜೀವಾಂತರ ಬೀಜ ಎಂದರೇನು?
ಉತ್ತರ: ಜೈವಿಕ ತಂತ್ರಜ್ಞಾನವನ್ನು ಉಪಯೋಗಿಸಿ ತಳೀಯವಾಗಿ ಮಾರ್ಪಡಿಸಿದ ಬೀಜವನ್ನು ಅಭಿವೃದ್ದಿ ಪಡಿಸಲಾಗುತ್ತದೆ. ಈ ಬೀಜವನ್ನು ತಳೀಯವಾಗಿ ಮಾರ್ಪಡಿಸಿದ ಬೀಜಎನ್ನುತ್ತಾರೆ. ಉದಾಹರಣೆಗೆ ಹೇಳುವುದಾದರೆ ಹತ್ತಿ ಬೆಳೆಯಲ್ಲಿ ಗುಲಾಬಿ ಕಾಯಿಕೊರಕದ ಕೀಟದ ನಿರೋಧಕ ಶಕ್ತಿಗಾಗಿ ಬ್ಯಾಸಿಲಿಸ್ ತುರೆಂಜೆನಿಸಿಸ್ ಜೀನ್‍ಗಳನ್ನು ವಂಶಾವಳಿಯಲ್ಲಿ ಸೇರಿಸುವುದು.

 

ಪ್ರಶ್ನೆ (8) ಬೀಜ ಪ್ರಮಾಣೀಕರಣಕ್ಕೆ ಕ್ಷೇತ್ರವನ್ನು ನೊಂದಾಯಿಸಲು ಬೆಳೆಗಾರರು/ಬೀಜೋತ್ಪಾದಕರು ಯಾರನ್ನು ಸಂಪರ್ಕಿಸಬೇಕು?
ಉತ್ತರ: ವೈಯಕ್ತಿಕ ಬೆಳೆಗಾರರು / ಬೀಜೋತ್ಪಾದಕರು ಪ್ರಮಾಣಿತ ಬೀಜೋತ್ಪಾದನೆಯನ್ನು
ಕೈಗೊಳ್ಳಲು ಇಚ್ಛಿಸುವವರು ಸಹಾಯಕ ನಿರ್ದೇಶಕರು, ಬೀಜ ಪ್ರಮಾಣನ ಸಂಸ್ಥೆ ಇವರನ್ನು
ಸಂಪರ್ಕಿಸ ಬಹುದಾಗಿರುತ್ತದೆ.

 

ಪ್ರಶ್ನೆ (9) ಪ್ರಮಾಣೀಕರಣ ಮಾದರಿಎಂದರೇನು?
ಉತ್ತರ: ಬೀಜಕಾಯ್ದ ವಿಭಾಗ 08 ರಅಡಿಯಲ್ಲಿ ಸ್ಥಾಪಿತವಾದ ಪ್ರಮಾಣನ ಸಂಸ್ಥೆ ಅಥವಾ 
ಪ್ರಮಾಣನ ಸಂಸ್ಥೆಯ ಬೀಜ ಪ್ರಮಾಣನ ಅಧಿಕಾರಿ ತೆಗೆದ ಬೀಜ ಮಾದರಿಯನ್ನು ಪ್ರಮಾಣೀತ ಮಾದರಿ ಎನ್ನುತ್ತಾರೆ.

 

ಪ್ರಶ್ನೆ (10) ಪ್ರಮಾಣಿತ ಬೀಜೋತ್ಪಾದಕ ಎಂದರೆ ಯಾರು?
ಉತ್ತರ: ಬೀಜ ಪ್ರಮಾಣೀಕರಣ ಮಾನ ದಂಡಗಳು ಹಾಗೂ ನಿಯಮಗಳ ಪ್ರಕಾರ ಯಾವ ಒಬ್ಬ ವ್ಯಕ್ತಿ/ಸಂಸ್ಥೆಯು ಬೀಜೋತ್ಪಾದನೆ ಕೈಗೊಳ್ಳುತ್ತಾರೆ ಅಥವಾ ಪ್ರಮಾಣಿತ ಬೀಜಗಳನ್ನು ವಿತರಿಸುತ್ತಾರೆ. ಅವರನ್ನು ಪ್ರಮಾಣಿತ ಬೀಜೋತ್ಪಾದಕ ಎನ್ನಬಹುದು.

 

ಪ್ರಶ್ನೆ (11) ಒಂದು ಬೆಳೆ ತಳಿಯ ಪ್ರಮಾಣೀಕರಣಕ್ಕೆಅರ್ಹತೆ ಏನು?
ಉತ್ತರ: ಬೀಜ ಕಾಯಿದೆ 1966ರ ವಿಭಾಗ 5 ರ ಪ್ರಕಾರ ಭಾರತ ಸರ್ಕಾರದ ಗೆಜೇಟ್‍ನಲ್ಲಿ ಪ್ರಕಟಣೆಯಾದ (Notified) ಬೆಳೆ ತಳಿಗಳನ್ನು ಮಾತ್ರ ಪ್ರಮಾಣೀಕರಣಕ್ಕೆ ಅರ್ಹವಾಗಿರುತ್ತದೆ. ಬೀಜ ಪ್ರಮಾಣೀಕರಣಕ್ಕೆ ಅರ್ಹರಾಗಲು ಯಾವುದೇ ವಿಧವು ಈ ಕೆಳಗಿನ ಅವಶ್ಯಕತೆಗಳನ್ನು ಪೂರೈಸಬೇಕು.

ಸಾಮಾನ್ಯ ಅಗತ್ಯತೆಗಳು: ಭಾರತೀಯ ಬೀಜಕಾಯ್ದೆ 1966ರ ಸೆಕ್ಷನ್-5ರ ಅಡಿಯಲ್ಲಿಅಧಿಸೂಚಿತ ವಿಧವಾಗಿರಬೇಕು. ಉತ್ಪಾದನಾ ಸರಪಳಿಯಲ್ಲಿರಬೇಕು ಮತ್ತು ಅದರ ನಿರ್ದಿಷ್ಟತೆಯನ್ನು ಕಂಡುಹಿಡಿಯಬೇಕು.

ಕ್ಷೇತ್ರ ಮಾನದಂಡಗಳು: ಕ್ಷೇತ್ರದ ಮಾನದಂಡಗಳು ಸೈಟ್‍ಆಯ್ಕೆ, ಪ್ರತ್ಯೇಕತೆಯ ಅವಶ್ಯಕತೆಗಳು, ಅಂತರ, ನೆಟ್ಟ ಅನುಪಾತ ಗಡಿ ಸಾಲುಗಳು ಇತ್ಯಾದಿಗಳನ್ನು ಒಳಗೊಂಡಿವೆ.

ನಿರ್ದಿಷ್ಟ ಅವಶ್ಯಕತೆಗಳು: ಯಾವುದೇ ಬೀಜದ ಬೆಳೆಯಲ್ಲಿ ಅನ್ಯಜಾತಿ ಇರುವಿಕೆ, ಜೋಳ,ಸಜ್ಜೆ, ಸೂರ್ಯಕಾಂತಿ ಇತ್ಯಾದಿಗಳಲ್ಲಿ ಪರಗ-ಚೆಲ್ಲುವವರು, ಮೆಕ್ಕೆಜೋಳದ ಶಿಲುಬೆಗಳಲ್ಲಿ ಚೆಲ್ಲುವಟಸೆಲ್, ರೋಗ ಪೀಡಿತ ಸಸ್ಯಗಳು, ಆಕ್ಷೇಪಾರ್ಹಕಳೆ ಸಸ್ಯಗಳು ಇತ್ಯಾದಿಗಳು ಗರಿಷ್ಠ ಅನುಮತಿಸುವ ಮಟ್ಟದಲ್ಲಿರಬೇಕು ಪ್ರಮಾಣೀಕರಣ.
ಬೀಜದ ಮಾನದಂಡಗಳು: ಕನಿಷ್ಠ ಬೀಜ ಪ್ರಮಾಣೀಕರಣ ಮಾನದಂಡಗಳನ್ನು ಬೆಳೆ ಪ್ರಕಾರವಾಗಿ ವಿಕಸಿಸಲಾಗಿದೆ.

 

ಪ್ರಶ್ನೆ (12) ಪ್ರಮಾಣಿತ ಬೀಜಎಂದರೇನು?
ಉತ್ತರ: ಬೀಜ ಕಾಯ್ದಿ ಮತ್ತು ನಿಯಮಗಳ ಪ್ರಕಾರಯಾವ ಒಂದು ಬೀಜವು ಪ್ರಮಾಣೀಕರಣದ ಮಾನದಂಡಗಳನ್ನು ಪೂರೈಸುತ್ತದೆಯೋ ಮತ್ತು ಪ್ರಮಾಣಿತ ಚೀಟಿಯನ್ನು ಹೊಂದಿರುವ ಚೀಲಗಳ ಬೀಜವನ್ನು ಪ್ರಮಾಣಿತ ಬೀಜ ಎನ್ನುತ್ತಾರೆ.

 

ಪ್ರಶ್ನೆ (13) ಒಂದು ಅರ್ಜಿಯಲ್ಲಿ ಗರಿಷ್ಟ ಎಷ್ಟು ಎಕರೆ ಕ್ಷೇತ್ರವನ್ನು ಪ್ರಮಾಣೀಕರಣಕ್ಕೆ ಅಳವಡಿಸಬಹುದು?
ಉತ್ತರ: ಒಂದು ಅರ್ಜಿಯಲ್ಲಿ ಗರಿಷ್ಟ 25 ಎಕರೆ ಕ್ಷೇತ್ರವನ್ನು ಪ್ರಮಾಣೀಕರಣಕ್ಕೆ ಅಂಗೀಕರಿಸ ಬಹುದಾಗಿರುತ್ತದೆ.

 

ಪ್ರಶ್ನೆ (14) ಬೀಜ ರಾಶಿ ಎಂದರೇನು?
ಉತ್ತರ: ಒಂದು ಬೀಜದ ಭಾಗವು ಭೌತಿಕವಾಗಿ ಗುರುತಿಸಬಹುದಾದ ಬೀಜದ ಪ್ರಮಾಣವಾಗಿದ್ದು ಅದು ಏಕರೂಪವಾಗಿರುತ್ತದೆ.

 

ಪ್ರಶ್ನೆ (15) ನೊಂದಾಣಿ ಮತ್ತು ನಿರೀಕ್ಷಣಾ ಶುಲ್ಕವನ್ನು ಹಿಂದಿರುಗಿಸಲು ಅವಕಾಶವಿದೆಯೆ?
ಉತ್ತರ: ಬೀಜೋತ್ಪಾದನಾ ಕ್ಷೇತ್ರದ ಕ್ಷೇತ್ರ ನಿರೀಕ್ಷಣೆಯನ್ನು ಒಂದು ಸಲ ಬೀಜ ಪ್ರಮಾಣನ ಅಧಿಕಾರಿಯು ನಮೂನೆ-1 ರ ಬಿತ್ತನೆ ದಿನಾಂಕದ ಪ್ರಕಾರ ಕೈಗೊಂಡರೆ, ತಾಕು ಬಿತ್ತನೆ ಆಗಿರಲಿ ಅಥವಾ ಬಿತ್ತನೆ ಆಗದೆ ಇರಲಿ ನೊಂದಣಿ & ನಿರೀಕ್ಷಣಾ ಶುಲ್ಕವನ್ನು ಹಿಂತಿರುಗಿಸಲು ಅವಕಾಶ ಇರುವುದಿಲ್ಲ.

 

ಪ್ರಶ್ನೆ (16) ಸೇವಾ ಮಾದರಿ ಎಂದರೇನು?
ಉತ್ತರ: ಕೇಂದ್ರಿಯ ಬೀಜ ಪರೀಕ್ಷಾ ಪ್ರಯೋಗಾಲಯ ಅಥವಾ ರಾಜ್ಯ ಬೀಜ ಪರೀಕ್ಷಾ ಪ್ರಯೋಗಾಲಯಕ್ಕೆಬೀಜ ಪರೀಕ್ಷಾ ವಿಶ್ಲೇಷಣೆಗಾಗಿಸಲ್ಲಿಸಲಾದಬೀಜ ಮಾದರಿಯನ್ನು ಸೇವಾ ಮಾದರಿ ಎನ್ನುತ್ತಾರೆ.


ಪ್ರಶ್ನೆ (17) ಕೊಯ್ಲು, ನೂಲು ಮತ್ತು ಸಾಗಣೆಯ ಸಮಯದಲ್ಲಿ ಬೀಜೋತ್ಪಾದಕರ ಪಾತ್ರವೇನು?
ಉತ್ತರ: ಪ್ರಮಾಣೀಕರಣಕ್ಕಾಗಿ ಬೀಜ ಬೆಳೆ ಸಭೆಕ್ಷೇತ್ರದ ಮಾನದಂಡಗಳನ್ನು ಪ್ರಮಾಣೀಕರಣ ಸಂಸ್ಥೆ ಹೊರಡಿಸಿದ ಮಾರ್ಗಸೂಚಿಗಳಿಗೆ ಅನುಗುಣವಾಗಿಕೊಯ್ಲು, ನೂಲು ಮತ್ತು ಬೀಜಸಂಸ್ಕರಣಘಟಕಕ್ಕೆ ಸಾಗಿಸಬೇಕು. ಈ ಕಾರ್ಯಾಚರಣೆಗಳ ಸಮಯದಲ್ಲಿ, ಬೀಜ ಉತ್ಪಾದಕರು ಬೀಜವನ್ನು ಮಿಶ್ರಣ ಮತ್ತು ಬೀಜ ಕ್ಷೀಣಿಸುವ ಇತರ ಕಾರಣಗಳಿಂದ ರಕ್ಷಿಸಲು ಎಲ್ಲಾ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳುತ್ತಾರೆ.

ಇತ್ತೀಚಿನ ನವೀಕರಣ​ : 29-06-2020 06:39 PM ಅನುಮೋದಕರು: Approver kssoca


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080