ಅಭಿಪ್ರಾಯ / ಸಲಹೆಗಳು

ಸಾವಯವ ವಿಭಾಗ (ಅಗಿಂದಾಗ್ಗೆ ಕೇಳುವ ಪ್ರಶ್ನೆಗಳು)

ಆಗಿಂದಾಗ್ಗೆ ಕೇಳುವ ಪ್ರಶ್ನೆಗಳು (ಸಾವಯವ ವಿಭಾಗ):


1. ಕ.ರಾ.ಸಾ.ಪ್ರ.ಸಂಸ್ಥೆ (KSOCA)ಎಂದರೇನು?

ಉ: ಕರ್ನಾಟಕರಾಜ್ಯ ಸಾವಯವ ಪ್ರಮಾಣನ ಸಂಸ್ಥೆ(Karnataka State Organic   Certification Agency)

 

2. National Programme for Organic Production (NPOP) ಎಂದರೇನು?

ಉ: ಭಾರತ ಸರ್ಕಾರದ ವ್ಯಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ, ನವದೆಹಲಿ ಇವರಿಂದ
ಸ್ಥಾಪಿತವಾದ ರಾಷ್ಟ್ರೀಯ ಸಾವಯವ ಉತ್ಪಾದನೆ ಯೋಜನೆ.


3. National Standards for Organic Production (NSOP) ಎಂದರೇನು?

ಉ: ರಾಷ್ಟ್ರೀಯ ಸಾವಯವ ಉತ್ಪಾದನೆಯ ಮಾನದಂಡಗಳು.

 

4. ಸಾಂದ್ರ ಕೃಷಿ ಪದ್ಧತಿಎಂದರೇನು?

ಉ: ಸಾವಯವ ಉತ್ಪನ್ನ ಮಾನದಂಡಗಳಿಗೆ ಸಾಮ್ಯತೆ ಇರದ ಕೃತಕ ಗೊಬ್ಬರಗಳು, ಕೀಟ, 
ರೋಗ ಹಾಗೂ ಕಳೆನಾಶಕಗಳ ಬಳಕೆಯ ಮೇಲೆ ಅವಲಂಬಿತವಾಗಿರುವ ಕೃಷಿ ಪದ್ಧತಿಗೆ ಸಾಂದ್ರ ಕೃಷಿ ಪದ್ಧತಿಎನ್ನುತ್ತಾರೆ.

 

5. ಸಾವಯವ ಕೃಷಿ ಎಂದರೇನು?

ಉ: ಒಂದು ಸಮಗ್ರ ಕೃಷಿ ಉತ್ಪಾದನಾ ನಿರ್ವಹಣಾ ಪದ್ಧತಿಯಾಗಿದ್ದು, ಸ್ಥಳೀಯವಾಗಿ ಲಭ್ಯವಿರುವ ನೈಸರ್ಗಿಕ ಸಂಪನ್ಮೂಲಗಳನ್ನು ಬಳಸಿ ಮಣ್ಣಿನ ಫಲವತ್ತತೆಯನ್ನು ಕಾಪಾಡಿಕೊಂಡು ಬರುವುದು ಹಾಗೂ ಪರಿಸರ ಸ್ನೇಹಿ ಜೈವಿಕ ವಿಧಾನಗಳಿಂದ ಕೀಟ ಮತ್ತು ರೋಗಗಳ ನಿರ್ವಹಣೆ ಕೈಗೊಂಡು ಉತ್ತಮ ಗುಣಮಟ್ಟದ ವಿಷ ವಸ್ತುಗಳ ಶೇಷಾಂಶವಿಲ್ಲದ ಆಹಾರ ಉತ್ಪಾದನೆ ಕೈಗೊಳ್ಳುವ ಬೇಸಾಯ ಪದ್ಧತಿ.

 

6. ಸಾವಯವ ಪ್ರಮಾಣೀಕರಣಎಂದರೇನು?

ಉ: ರಾಷ್ಟ್ರೀಯ ಸಾವಯವ ಮಾನದಂಡಗಳ ಅನ್ವಯ ಉತ್ಪಾದನೆ ಹಾಗೂ ಸಂಸ್ಕರಣೆಗೊಂಡ ಸಾವಯವ ಉತ್ಪನ್ನಗಳನ್ನು ಮಾನ್ಯತೆ ಪಡೆದ ಪ್ರಮಾಣೀಕರಣ ಸಂಸ್ಥೆಯವತಿಯಿಂದ ಪ್ರಮಾಣೀಕರಿಸುವ ವಿಧಾನಕ್ಕೆ ಸಾವಯವ ಪ್ರಮಾಣೀಕರಣ ಎನ್ನುತ್ತಾರೆ.

 

7. ಪರಿವರ್ತನಾಅವಧಿಎಂದರೇನು?

ಉ: ಸಾವಯವ ನಿರ್ವಹಣಾ ಪದ್ಧತಿಯ ನಿರೀಕ್ಷಣಾ ದಿನಾಂಕದಿಂದ ಸಾವಯವ ಪ್ರಮಾಣೀಕರಣ ಹಂತದವರೆಗಿನ ಅವಧಿಯನ್ನು ಪರಿವರ್ತನಾ ಅವದಿ ಎನ್ನುತ್ತಾರೆ.

 

8. ಪರಿವರ್ತನೆಎಂದರೇನು?
ಉ: ಕೃಷಿ ಕ್ಷೇತ್ರವು ಆಧುನಿಕ ಬೇಸಾಯ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆ ಮಾರ್ಪಾಡುಗೊಳ್ಳುವುದಕ್ಕೆ ಪರಿವರ್ತನೆ ಎಂದು ಕರೆಯುತ್ತಾರೆ.


9. ನಿರೀಕ್ಷಣೆಎಂದರೇನು?

ಉ: ಸಾವಯವ ಮಾನದಂಡಗಳ ಅನ್ವಯ ಸಂಬಂಧಪಟ್ಟ ರೈತರು ಸಾವಯವ ಕೃಷಿ ಪದ್ಧತಿಯನ್ನು ಅನುಸರಿಸುತ್ತಿದ್ದಾರೆಯೇ ಅಥವಾ ಇಲ್ಲವೇ ಎಂದು ಕ್ಷೇತ್ರಕ್ಕೆ ಸಾವಯವ ಪ್ರಮಾಣನ ಅಧಿಕಾರಿಗಳು ಭೇಟಿ ನೀಡಿ ಪರಿವೀಕ್ಷಿಸುವ ವಿಧಾನಕ್ಕೆ ನಿರೀಕ್ಷಣೆ ಎನ್ನುತ್ತಾರೆ.

 

10. ಸಮಾನಾಂತರ ಕೃಷಿ ಉತ್ಪಾದನೆಎಂದರೇನು?

ಉ: ಒಬ್ಬರೇ ರೈತರು ಸಾವಯವ ಕೃಷಿ ಪದ್ಧತಿ ಹಾಗೂ ಆಧುನಿಕ ಪದ್ಧತಿಯಲ್ಲಿ ಏಕಕಾಲದಲ್ಲಿ ಒಂದೇ ಕ್ಷೇತ್ರ ಅಥವಾ ಬೇರೆ ಬೇರೆ ಕ್ಷೇತ್ರದಲ್ಲಿ ಒಂದೇ ವಿಧವಾದ ಬೆಳೆಯನ್ನು ಬೆಳೆಯುವ ವಿಧಾನಕ್ಕೆ ಸಮಾನಾಂತರ ಕೃಷಿ ಉತ್ಪಾದನೆ ಎನ್ನುತ್ತಾರೆ. ಇದೇ ನಿಯಮವು ಒಂದೇ ಭಾಗದಲ್ಲಿರುವ ಪ್ರಮಾಣೀಕೃತ ಸಾವಯವ ಕೃಷಿ ಕ್ಷೇತ್ರ ಹಾಗೂ ಪರಿವರ್ತನೆಗೊಳ್ಳುತ್ತಿರುವ ಸಾವಯವ ಕೃಷಿ ಕ್ಷೇತ್ರಕ್ಕೂ ಅನ್ವಯಿಸುತ್ತದೆ.

 

11. ಭಾಗಶಃ ಪರಿವರ್ತನೆ ಎಂದರೆನು?

ಉ: ರೈತರಒಟ್ಟು ಕೃಷಿ ಕ್ಷೇತ್ರದಲ್ಲಿ ಕೆಲವೊಂದು ಭಾಗವನ್ನು ಸಾವಯವ ಕೃಷಿ ಪದ್ಧತಿಗೆ ಅಳವಡಿಸುವ ವಿಧಾನಕ್ಕೆ ಭಾಗಶಃ ಪರಿವರ್ತನೆಎನ್ನುತ್ತಾರೆ. ಉಳಿದ ಭಾಗವನ್ನು ಸಾವಯವ ಕೃಷಿ ಪದ್ಧತಿಗೆ ಹಂತ ಹಂತವಾಗಿ ಪರಿವರ್ತನೆ ಮಾಡಲಾಗುತ್ತದೆ.

 

12. ರಾಷ್ಟ್ರೀಯ ಸಾವಯವ ಕೃಷಿ ಉತ್ಪಾದನೆಯ ನಿಯಮಾವಳಿಗಳನ್ನು ಎಲ್ಲಿಂದ/ಯಾರಿಂದ ಪಡೆಯಬಹುದು?

ಉ: ನೀವು ಕ.ರಾ.ಸಾ.ಪ್ರ.ಸಂಸ್ಥೆ ವತಿಯಿಂದ ನೇರವಾಗಿ ಅಥವಾ ಅಂರ್ತಜಾಲದಲ್ಲಿ www.apeda.gov.in ವೆಬ್‍ಸೈಟ್‍ನಲ್ಲಿ ಡೌನ್ ಲೋಡ್ ಮಾಡಿಕೊಳ್ಳಬಹುದು.

 

13. ಕೃಷಿ ಕ್ಷೇತ್ರವು ಸಾವಯವ ಪ್ರಮಾಣೀಕರಣ ಹಂತಕ್ಕೆ ಬರಲು ಎಷ್ಟು ಕಾಲಾವಕಾಶ ಬೇಕಾಗುತ್ತದೆ.?

ಉ: ವಾರ್ಷಿಕ ಬೆಳೆಗಳಿಗೆ 2 ವರ್ಷಗಳ ಕಾಲ ಹಾಗೂ ಬಹುವಾರ್ಷಿಕ ಬೆಳೆಗಳಿಗೆ 3 
ವರ್ಷಗಳ ಕಾಲ ಬೇಕಾಗುತ್ತದೆ.

 

14. ಸಾವಯವ ಉತ್ಪನ್ನಗಳಿಗೆ ಬಳಸುವ ಲೇಬಲ್‍ನ್ನು ಮುದ್ರಿಸುವ ಮುನ್ನಯಾರಿಂದ ಅನುಮತಿ ಪಡೆಯಬೇಕು?

ಉ: ಕ.ರಾ.ಸಾ.ಪ್ರ.ಸಂಸ್ಥೆಯು NPOP ಮಾರ್ಗಸೂಚಿಗಳ ಅನ್ವಯ ಸಾವಯವ
ಉತ್ಪನ್ನಗಳಿಗೆ ಬಳಸುವ ಲೇಬಲ್ಲ್‍ನ್ನು ಮುದ್ರಿಸಲು ಅನುಮತಿ ನೀಡಲಾಗುವುದು.

 

15. ಸಾವಯವ ಪ್ರಮಾಣನ ಪತ್ರದ ಸಿಂಧುತ್ವ ಅವಧಿಯು ಎಷ್ಟು?

ಉ: ಸಿಂಧುತ್ವವು ಸಾವಯವ ಪ್ರಮಾಣನ ಪತ್ರವನ್ನು ನೀಡಿದ ದಿನಾಂಕದಿಂದ 1 ವರ್ಷದ ಅವಧಿಯವರೆಗೆ ಇರುತ್ತದೆ.

 

16. ಪ್ರಮಾಣನ ಸಂಸ್ಥೆಯು ಸಾವಯವ ಕೃಷಿ ಕ್ಷೇತ್ರವನ್ನು ಯಾವಕಾಲದಲ್ಲಿ/ಯಾವ ಅಂತರದಲ್ಲಿ ನಿರೀಕ್ಷಣೆಯನ್ನು ಕೈಗೊಳ್ಳುತ್ತದೆ?

ಉ: ಪ್ರತಿ ವರ್ಷಕ್ಕೆ ಒಂದು ನಿರೀಕ್ಷಣೆಯನ್ನು ಕಡ್ಡಾಯವಾಗಿ ರೈತರಿಗೆ ತಿಳಿಸಿ ನಿರೀಕ್ಷಣೆ ಕೈಗೊಳ್ಳಲಾಗುವುದು. ವಿಶೇಷ ಸಂದರ್ಭಗಳಲ್ಲಿ ಅವಶ್ಯಕತೆಗೆ ಅನುಗುಣವಾಗಿ ನಿರೀಕ್ಷಣೆ ಕೈಗೊಳ್ಳಬಹುದು.

 

17. ಆಂತರಿಕ ನಿಯಂತ್ರಣ ಪದ್ಧತಿಎಂದರೇನು?

ಉ: ಸಾವಯವ ಪ್ರಮಾಣನ ಸಂಸ್ಥೆಯು ನೋಂದಾಯಿತ ರೈತರ ಗುಂಪಿನಲ್ಲಿರುವ ಕೆಲವು ಸದಸ್ಯರುಗಳಿಗೆ ಗುಂಪಿನಲ್ಲಿರುವ ಎಲ್ಲಾ ರೈತರ ಕೃಷಿ ಕ್ಷೇತ್ರಗಳನ್ನು ಪರಿವೀಕ್ಷಿಸಿ ಲಿಖಿತರೂಪದಲ್ಲಿ ಗುಣಮಟ್ಟವನ್ನು ಕಾಪಾಡುವ ಅಧಿಕಾರವನ್ನು ನೀಡುವ ವ್ಯವಸ್ಥೆಗೆ ಆಂತರಿಕ ನಿಯಂತ್ರಣ ಪದ್ಧತಿ ಎಂದು ಕರೆಯುತ್ತಾರೆ.

 

18. ವ್ಯವಹಾರಿಕ/ಆಮದು ಪ್ರಮಾಣ ಪತ್ರ Transaction Certificate (TC) ಎಂದರೇನು?

ಉ: NPOP ಮಾನದಂಡಗಳ ಪ್ರಕಾರ ಉತ್ಪಾದಿಸಿದ ಉತ್ಪನ್ನ/ಸಂಸ್ಕರಿಸಿದ ನಿಜವಾದ(ಚಿಛಿಣuಚಿಟ) ದಾಸ್ತಾನಿಗೆ ಪ್ರಮಾಣನ ಸಂಸ್ಥೆಯ ವತಿಯಿಂದ ಲಿಖಿತರೂಪದಲ್ಲಿ ನೀಡುವ ಪ್ರಮಾಣನ ಪತ್ರಕ್ಕೆ ವ್ಯವಹಾರಿಕ ಪ್ರಮಾಣ ಪತ್ರಎನ್ನುತ್ತಾರೆ.


19. ಸಾವಯವ ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ಇರಾಡಿಯೇಷನ್ ಪದ್ಧತಿಯನ್ನು ಬಳಸಬಹುದೆ?

ಉ: ಸಾವಯವ ಆಹಾರ ಉತ್ಪನ್ನಗಳ ಸಂಸ್ಕರಣೆಯಲ್ಲಿ ಇರಾಡಿಯೇಷನ್ ಪದ್ಧತಿಯನ್ನು ಬಳಸುವಂತಿಲ್ಲ.


20. ಎ.ಎಫ್.ಎಲ್ (AFL) ಎಂದರೇನು? 
ಉ: ಎ.ಎಫ್.ಎಲ್ (AFL) ಎಂದರೆ ಎಲ್ಲಾ ರೈತರ ಪಟ್ಟಿ ಇದರಲ್ಲಿ ರೈತರ ಹೆಸರು, ಹಳ್ಳಿಯ ಹೆಸರು, ಒಟ್ಟು ಸಾವಯವ ವಿಸ್ತೀರ್ಣ, ಸಮೀಕ್ಷೆ ಸಂಖ್ಯೆ, ಜಿಪಿಸ್ ನಿರ್ದೇಶಾಂಕಗಳು, ರಾಸಾಯನಿಕವನ್ನು ಸಿಂಪಡಿಸಿದ ಕೊನೆಯ ದಿನಾಂಕ, ಸೇವಾ ಪೂರ್ಯೆಕೆದಾರರೊಂದಿಗೆ ರೈತರ ನೋಂದಣಿ ದಿನಾಂಕ, ಬೆಳೆ ವಿವರಗಳೊಂದಿಗೆ ಅಂದಾಜು ಇಳುವರಿ ಮತ್ತು ಸಾವಯವ ಸ್ಥಿತಿಯನ್ನು ಒಳಗೊಂಡಿರುತ್ತದೆ.


21. ಪ್ರತ್ಯೆಕತಾ ವಲಯ (Buffer Zone) ಎಂದರೇನು? 
ಉ: ಸಾಂಪ್ರದಾಯಿಕ ಉತ್ಪಾದಾನಾ ಘಟಕದಿಂದ ಸಾವಯವ ಉತ್ಪಾದನಾ ಘಟಕದ ನಡುವೆ ಇರುವ ಅಂತರವನ್ನು ಪ್ರತ್ಯೆಕತಾ ವಲಯ (Buffer Zone) ಎನ್ನುತ್ತಾರೆ.

ಇತ್ತೀಚಿನ ನವೀಕರಣ​ : 29-06-2020 04:00 PM ಅನುಮೋದಕರು: Approver kssoca


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2024, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080