ಅಭಿಪ್ರಾಯ / ಸಲಹೆಗಳು

ಸಾವಯವ ವಿಭಾಗ

KSOCA ಸಂಸ್ಥೆಯ ಬಗ್ಗೆ:


ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯು 1974 ನೇ ಸಾಲಿನಲ್ಲಿ ಕರ್ನಾಟಕ ಸರ್ಕಾರದ ಒಂದು ಸ್ವಾಯುತ್ತ ಸಂಸ್ಥೆಯಾಗಿ ಕೇಂದ್ರ ಬೀಜ ಕಾಯಿದೆ-1966 ರ ಅಡಿಯಲ್ಲಿ ಸ್ಥಾಪಿಸಿದೆ. ಸೊಸೈಟಿ ನೋಂದಣಿ ಕಾಯಿದೆ-1960ರ ಅಡಿಯಲ್ಲಿ ನೋಂದಾಯಿಸಲ್ಪಟ್ಟಿದ್ದು, ರಾಜ್ಯದಲ್ಲಿ ಬೆಳೆಯುವ ವಿವಿಧ ಅಧಿಸೂಚಿತ ತಳಿ ಬೆಳೆಗಳ ಬೀಜಗಳನ್ನು ಪ್ರಮಾಣೀಕರಿಸಿ ರೈತಬಾಂಧವರಿಗೆ ಸಕಾಲದಲ್ಲಿ ಉತ್ತಮಗುಣಮಟ್ಟದ ಬಿತ್ತನೆ ಬೀಜವನ್ನು ಒದಗಿಸುವಲ್ಲಿ ಮಹತ್ತರ ಪಾತ್ರವನ್ನು ನಿರ್ವಹಿಸುತ್ತಾ ಬಂದಿದೆ.

ಕರ್ನಾಟಕ ರಾಜ್ಯದಲ್ಲಿ ಸಾವಯವ ಬೆಳೆ/ಉತ್ಪನ್ನಗಳ ಬೇಡಿಕೆ ದಿನೇ ದಿನೇ ಹೆಚ್ಚಾಗುತ್ತಿದ್ದು ಇವುಗಳ ಗುಣಮಟ್ಟವನ್ನು ಖಾತರಿ ಪಡಿಸಲು ಸರ್ಕಾರಿ ಸ್ವಾಮ್ಯದ ಸಂಸ್ಥೆ ಇಲ್ಲದಿರುವುದನ್ನು ಮನಗಂಡು ಘನ ಸರ್ಕಾರದ ಆದೇಶ ಸಂಖ್ಯೆ: ಕೃ.ಇ.50. ಎಎಇ. 2012 ಬೆಂಗಳೂರು ದಿನಾಂಕ 04.01.2013ರ ಪ್ರಕಾರ ಕರ್ನಾಟಕ ರಾಜ್ಯ ಬೀಜ ಪ್ರಮಾಣನ ಸಂಸ್ಥೆಯು, ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ(KSSOCA) ಎಂದು ಮರು ನಾಮಕರಣಗೊಂಡು ಇದರ ಅಡಿಯಲ್ಲಿ ಕರ್ನಾಟಕ ರಾಜ್ಯ ಸಾವಯವ ಪ್ರಮಾಣನ ಸಂಸ್ಥೆ(KSOCA)ಸ್ಥಾಪಿತವಾಗಿದೆ.

KSSCA ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ ಅಧಿಕಾರಿ ಮತ್ತು ಸಿಬ್ಬಂದಿಯನ್ನು ಸಾವಯವ ಪ್ರಮಾಣನ ವಿಭಾಗಕ್ಕೆ APEDA ಮಾರ್ಗಸೂಚಿ ಪ್ರಕಾರ ವಿವಿಧ ದರ್ಜೆಯ ಅಧಿಕಾರಿ ಮತ್ತು ನೌಕರರ ಸಂಖ್ಯೆಗಳಿಗನುಗುಣವಾಗಿ ಹೊಸದಾಗಿ ಸೃಜಿಸಿ ವೃತ್ತಿಪರ ಹಾಗೂ ತಾಂತ್ರಿಕ ಕೌಶಲ್ಯವುಳ್ಳ ಏಳು ತಾಂತ್ರಿಕ ಅಧಿಕಾರಿಗಳು ಹಾಗೂ ನಾಲ್ಕು ಲಿಪಿಕ/ಇತರೆ ಸಿಬ್ಬಂದಿಗಳನ್ನು ನೇಮಕಮಾಡಿ, ಸದರಿ ಅಧಿಕಾರಿಗಳಿಗೆ ಸಾವಯವ ಪ್ರಮಾಣೀಕರಣದ ಬಗ್ಗೆ ಸೂಕ್ತ ತರಬೇತಿ ನೀಡಲಾಗಿರುತ್ತದೆ. National Accreditation Body (NAB), ನವ ದೆಹಲಿ, ಭಾರತ ಸರ್ಕಾರ ವತಿಯಿಂದ ಸಾವಯವ ಪ್ರಮಾಣೀಕರಣವನ್ನು ಕೈಗೊಳ್ಳಲು ದಿನಾಂಕ:17.08.2015ರಿಂದ ಜಾರಿಗೆ ಬರುವಂತೆ KSOCA ಸಂಸ್ಥೆಗೆ Accreditation ದೊರಕಿರುತ್ತದೆ.

 

KSOCA ಸಂಸ್ಥೆಯ ಉದ್ದೇಶಗಳು:


• ಸರ್ಕಾರಿ ಸ್ವಾಮ್ಯದ KSOCA ಸಂಸ್ಥೆಯು ಕೈಗೆಟುಕುವ ಪ್ರಮಾಣೀಕರಣ ಶುಲ್ಕದೊಂದಿಗೆ ರಾಷ್ಟ್ರೀಯ ಮಾನದಂಡಗಳ [National Programme for Organic Production (NPOP)] ಪ್ರಕಾರ ಪ್ರಮಾಣನ ಕಾರ್ಯ ಕೈಗೊಳ್ಳುವುದು.
• ಪ್ರಮಾಣಿತ ಸಾವಯವ ಉತ್ಪನ್ನಗಳನ್ನು ಗ್ರಾಹಕರಿಗೆ ದೊರಕಿಸಿಕೊಡುವಲ್ಲಿ ಸಹಕಾರಿಯಾಗುವುದು.

ಸಾವಯವ ಕೃಷಿ ಕ್ಷೇತ್ರಗಳನ್ನು ಪ್ರಮಾಣೀಕರಿಸಲುಅನುಸರಿಸಬೇಕಾದ ಕ್ರಮಗಳು:
1. ಸಾವಯವ ಭೂಪರಿವರ್ತನೆ: ಸಾಂದ್ರ ಬೇಸಾಯ ಪದ್ಧತಿಯಿಂದ ಸಾವಯವ ಬೇಸಾಯ ಪದ್ಧತಿಗೆ ಭೂಪರಿವರ್ತನೆಗೊಳ್ಳಲು ಬೇಕಾಗುವ ಸಮಯ
     • ವಾರ್ಷಿಕ ಬೆಳೆಗಳಿಗೆ:2 ವರ್ಷಗಳು 
     • ಬಹುವಾರ್ಷಿಕಬೆಳೆಗಳಿಗೆ: 3 ವರ್ಷಗಳು

2. ಭಾಗಶಃ ಪರಿವರ್ತನೆ: ಭಾಗಶಃ ಭೂಪರಿವರ್ತನೆಗೆ ಒಳಪಡುವ ಕೃಷಿ ಕ್ಷೇತ್ರಗಳು ಹಾಗೂ ಶೇಖರಣ ಸ್ಥಳಗಳು ಪ್ರತ್ಯೇಕವಾಗಿದ್ದು, ಪರಿವೀಕ್ಷಣೆ ಮಾಡುವಂತಿರಬೇಕು.
3. ಬಿತ್ತನೆ ಬೀಜ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳು(Planting material): ಸಾವಯವ ಕೃಷಿಯಲ್ಲಿ ಉಪಯೋಗಿಸುವ ಬಿತ್ತನೆ ಬೀಜ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳು ಪ್ರಮಾಣಿತ ಸಾವಯವ ಮೂಲದ್ದಾಗಿರಬೇಕು, ಇಲ್ಲವಾದಲ್ಲಿ ರಸಾಯನಿಕ ಅನುಪಚರಿತ ಬಿತ್ತನೆಬೀಜ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳನ್ನು ಬಳಸಬಹುದು.
4. ಸಾವಯವಕೃಷಿಯಲ್ಲಿ ಬಳಸುವ ಗೊಬ್ಬರಗಳು ಮತ್ತು ಸಸ್ಯ ಸಂರಕ್ಷಣೆ: ಪ್ರಮಾಣಿತ ಸಾವಯವ ಮೂಲದ ಗೊಬ್ಬರಗಳು ಹಾಗೂ ಪೀಡೆನಾಶಕಗಳನ್ನು ಬಳಸಬೇಕು (ಆದಷ್ಟು ಕ್ಷೇತ್ರದಲ್ಲೇ ಉತ್ಪಾದಿಸಿ ಉಪಯೋಗಿಸಬೇಕು).
5. ತಡೆಗೋಡೆ/ಪ್ರತ್ಯಕತಅಂತರ (ಬಫರ್‍ಜ್ಹೋನ್): ರಾಸಾಯನಿಕ ಗೊಬ್ಬರ, ಬೆಳೆವಣಿಗೆಯ ಹಾರ್ಮೋನ್‍ಗಳು ಹಾಗೂ ಪೀಡೆನಾಶಕಗಳ ಮಾಲಿನ್ಯ/ ಮಿಶ್ರಣವಾಗುವುದನ್ನು ತಡೆಯುವಭೌತಿಕ/ಜೈವಿಕ ತಡೆಗೋಡೆಯನ್ನು ನಿರ್ಮಿಸುವುದು ಅಥವಾ ಪ್ರತ್ಯೇಕತ ಅಂತರವನ್ನು ಕಾಪಾಡುವುದು.
6. ಜೈವಿಕ ವೈವಿಧ್ಯತೆ: ಜೈವಿಕ ವೈವಿಧ್ಯತೆಯನ್ನು ಕಾಪಾಡಬೇಕು. 
7. ಕೃಷಿ ಉಪಕರಣಗಳು: ಪ್ರತ್ಯೇಕವಿರಬೇಕು ಇಲ್ಲವಾದಲ್ಲಿ ಸಾವಯವ ಕೃಷಿಯಲ್ಲಿ ಬಳಸುವ ಮುನ್ನ ಸ್ವಚ್ಚಗೊಳಿಸಿ ಉಪಯೋಗಿಸಬೇಕು.
8. ಕ್ಷೇತ್ರ ಮಟ್ಟದಲ್ಲಿದಾಖಲಾತಿಗಳ ನಿರ್ವಹಣೆ:
   • ಕ್ಷೇತ್ರ ದಿನಚರಿ (Farm Diary)
   • ವಾರ್ಷಿಕ ಸಾವಯವ ನಿರ್ವಹಣಾಯೋಜನೆ (Organic Farm Management Plan)
   • ಖರೀದಿಸಿದ ದಾಖಲೆಗಳು 
   • ಮಾರಾಟದ ದಾಖಲೆಗಳು 
   • ಮಣ್ಣು ಮತ್ತು ನೀರಿನ ಪರೀಕ್ಷಾ ವರದಿಗಳು
   • ಸಾವಯವಕೃಷಿಯ ಬಗ್ಗೆ ತರಬೇತಿ ಪಡೆದ ಮಾಹಿತಿ

9. ಕೊಯ್ಲು: ಸಾವಯವ ಬೆಳೆಗಳ ಕೊಯ್ಲಿನಲ್ಲಿ ಹಾಗೂ ಕೊಯ್ಲೋತ್ತರ ಚಟುವಟಿಕೆಗಳಲ್ಲಿ ಬಳಸುವ ಉಪಕರಣಗಳು ರಾಸಾಯನಿಕ ಕಲುಷಿತ ಮುಕ್ತವಾಗಿರಬೇಕು.

10. ಶೇಖರಣೆ ಮತ್ತು ಸಾಗಣಿಕೆ: ಸಾವಯವ ಕೃಷಿ ಉತ್ಪನ್ನಗಳನ್ನು ರಾಸಾಯನಿಕ ಕಲುಷಿತ ಮುಕ್ತವಾಗಿ ಶೇಖರಣೆಮತ್ತು ಸಾಗಾಣಿಕೆ ಮಾಡಬೇಕು.

 

ಸಾವಯವ ಕೃಷಿ ಪ್ರಮಾಣೀಕರಣದಲ್ಲಿ ನಿಷೇಧಾತ್ಮಕ ಕ್ರಮಗಳು :


1. ಸಮಾನಾಂತರ ಬೆಳೆ (Parallel production): ಸಾಂದ್ರ ಹಾಗೂ ಸಾವಯವ ಕೃಷಿ ಕ್ಷೇತ್ರಗಳಲ್ಲಿ ಒಂದೇ/ಏಕರೀತಿಯ ಬೆಳೆಗಳನ್ನು ಬೆಳೆಯಬಾರದು
2. ಬಿತ್ತನೆ ಬೀಜ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳು:
   a) ರಾಸಾಯನಿಕವಾಗಿ ಉಪಚರಿಸಿದ ಬಿತ್ತನೆ ಬೀಜ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು
   b) ಜೈವಿಕವಾಗಿ ಮಾರ್ಪಾಟುಗೊಂಡ (Genetically modified) ಬಿತ್ತನೆ ಬೀಜ ಮತ್ತು ಸಸ್ಯ/ಸಸ್ಯ/ಸಸ್ಯಾಭಿವೃದ್ಧಿ ಭಾಗಗಳನ್ನು ಉಪಯೋಗಿಸಬಾರದು.
3. ಸಾವಯವ ಕೃಷಿಯಲ್ಲಿ ರಾಸಾಯನಿಕಗೊಬ್ಬರ, ಪೀಡೆನಾಶಕಗಳು ಹಾಗೂ ಬೆಳೆವಣಿಗೆಯ ಹಾರ್ಮೋನ್‍ಗಳನ್ನು ಉಪಯೋಗಿಸಬಾರದು
4. ಸಾವಯವ ಕೃಷಿಯಿಂದ ಸಾಂದ್ರ ಕೃಷಿ ಪದ್ಧತಿಗೆ ಹಾಗೂ ಸಾಂದ್ರ ಕೃಷಿ ಪದ್ಧತಿಯಿಂದ ಸಾವಯವ ಕೃಷಿ ಪದ್ಧತಿಗೆಆಗಿಂದಾಗೆ ಬದಲಾವಣೆ ಮಾಡಬಾರದು.
5. ಮನುಷ್ಯನ ಮಲ, ಮೂತ್ರವನ್ನು ಸಾವಯವ ಕೃಷಿಯಲ್ಲಿ ಗೊಬ್ಬರವಾಗಿ ಬಳಸಬಾರದು. 
6. ತಂಬಾಕು ಕಷಾಯವನ್ನು ಬಳಸಬಾರದು.
7. ಕೃತಕ ಬಣ್ಣ (dyes) ಗಳನ್ನು ಬಳಸಬಾರದು.

ಇತ್ತೀಚಿನ ನವೀಕರಣ​ : 03-02-2023 05:50 PM ಅನುಮೋದಕರು: Approver kssoca


ಹಕ್ಕುತ್ಯಾಗ

ಈ ಪುಟವು ಸರ್ಕಾರಿ ಸಚಿವಾಲಯ/ ಇಲಾಖೆ/ ಸಂಸ್ಥೆಗಳಿಗೂ ಲಿಂಕುಗಳನ್ನು ಕಲ್ಪಿಸುತ್ತದೆ ಎಂಬುದನ್ನು ದಯವಿಟ್ಟು ಗಮನಿಸಿ. ಈ ವೆಬ್ ಸೈಟುಗಳ ವಿಷಯಗಳು ಆಯಾ ಸಂಸ್ಥೆಗಳ ಸ್ವತ್ತೇ ಆಗಿದ್ದು, ಯಾವುದೇ ಹೆಚ್ಚಿನ ಮಾಹಿತಿ ಅಥವಾ ಸಲಹೆಗಾಗಿ ಅವರನ್ನೇ ಸಂಪರ್ಕಿಸುವುದು

ಜಾಲತಾಣ ನೀತಿಗಳು

  • ಹಕ್ಕುಸ್ವಾಮ್ಯ ನೀತಿ
  • ಬಾಹ್ಯಜಾಲತಾಣ ಸಂಪರ್ಕ ನೀತಿ
  • ಭದ್ರತಾ ನೀತಿ
  • ಕರಾರುಗಳು ಮತ್ತು ಷರತ್ತುಗಳು

ಸಂದರ್ಶಕರು

  • ಇತ್ತೀಚಿನ ನವೀಕರಣ​ :
  • ಸಂದರ್ಶಕರು :
  • ಆವೃತ್ತಿ :
ವಿಷಯದ ಮಾಲೀಕತ್ವ ಮತ್ತು ನಿರ್ವಹಣೆ : ಕರ್ನಾಟಕ ರಾಜ್ಯ ಬೀಜ ಮತ್ತು ಸಾವಯವ ಪ್ರಮಾಣನ ಸಂಸ್ಥೆ
ವಿನ್ಯಾಸ, ಅಭಿವೃದ್ಧಿ ಮತ್ತು ಪ್ರಕಟಣೆ : ಇ-ಆಡಳಿತ ಕೇಂದ್ರ , ಕರ್ನಾಟಕ ಸರ್ಕಾರ © 2023, ಎಲ್ಲಾ ಹಕ್ಕುಗಳೂ ಕಾಯ್ದಿರಿಸಿವೆ

ಜಾಲತಾಣದ ಉತ್ತಮ ನೋಟಕ್ಕಾಗಿ ಕ್ರೋಮ್‌ v-87.0.4280.141, ಮೈಕ್ರೋಸಾಫ್ಟ್‌ ಎಡ್ಜ್‌ v-87.0.664.75, ಫೈರ್‌ಫಾಕ್ಸ್‌ v-83.0 ಬ್ರೌಸರ್‌ಗಳನ್ನು ಬಳಸಿ. ಸ್ಥಿರಚಿತ್ರಣ : 1280x800 to 1920x1080